‘ನಾಮಫಲಕ ಹಾಕುವಂತಿಲ್ಲ’ ಪೊಲೀಸರ ಎಚ್ಚರಿಕೆ



29-11-2017

ಬೆಂಗಳೂರು: ವಾಹನಗಳ ನಂಬರ್ ಪ್ಲೇಟ್‍ಗಳ ಮೇಲೆ ವಿವಿಧ ಸಂಘಟನೆಗಳ ಹೆಸರಿನ ನಾಮಫಲಕಗಳನ್ನು ಹಾಕಿಕೊಂಡು ಸಂಚರಿಸುತ್ತಿದ್ದ ವಾಹನಗಳ ವಿರುದ್ದ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸಂಚಾರ ಪೊಲೀಸರು ಸುಮಾರು 1 ಲಕ್ಷ 26 ಸಾವಿರಕ್ಕೂ ಹೆಚ್ಚು ವಾಹನಗಳ ನಾಮಫಲಕಗಳ ತೆರವುಗೊಳಿಸಿದ್ದಾರೆ.

ನಗರದ ಪಶ್ಚಿಮದಲ್ಲಿ 70 ಸಾವಿರ ಪೂರ್ವದಲ್ಲಿ 50 ಸಾವಿರ ಹಾಗೂ ಉತ್ತರದಲ್ಲಿ 6 ಸಾವಿರ ವಾಹನಗಳ ಮೇಲಿನ ಸಂಘಟನೆಗಳ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಜಯಕ ರ್ನಾಟಕ, ಕನ್ನಡ ರಕ್ಷಣಾ ವೇದಿಕೆ, ಸ್ವಾಭಿಮಾನಿ ಕನ್ನಡಿಗರ ವೇದಿಕೆ, ಕನ್ನಡ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಹೆಸರಿನಲ್ಲಿದ್ದ ನಾಮಫಲಕ ತೆರವುಗಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಯಾವುದೇ ಅನುಮತಿ ಇಲ್ಲದೆ ಇಂತಹ ನಾಮಫಲಕ ಹಾಕುವಂತಿಲ್ಲ ಎನ್ನುವ ಎಚ್ಚರಿಕೆ ನೀಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

Number plate Traffic police ನಾಮಫಲಕ ಜಯಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ