ಎರಡು ತಲೆ ಹಾವು: 4 ಮಂದಿ ಬಂಧನ

Two head snakes: 4 arrested

29-11-2017 251

ಬೆಂಗಳೂರು: ಎರಡು ತಲೆ ಹಾವನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಚಿತ್ತೂರಿನ ಪ್ರಶಾಂತಿ ನಗರದ ಶ್ರೀನಿವಾಸ (38), ಕತ್ರಿಗುಪ್ಪೆಯ ಹೇಮಂತ್ (38) ಹಾಗೂ ಹಾವನ್ನು ಖರೀದಿಸಲು ಬಂದಿದ್ದ ಹೊಸಕೋಟೆಯ ಅಲೆಕ್ಸಾಂಡರ್ (46) ಹಾಗೂ ಮಹೇಶ (30) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಾದ ಶ್ರೀನಿವಾಸ್ ಹಾಗೂ ಹೇಮಂತ್, ಆಂಧ್ರದ ಚಿತ್ತೂರಿನ ಕಾಡಿನಿಂದ ಹಾವನ್ನು ಹಿಡಿದುಕೊಂಡು ಲಗೇಜ್ ಬ್ಯಾಗ್‍ನಲ್ಲಿ ತೆಗೆದುಕೊಂಡು ಬಂದು ಇದನ್ನು ಮನೆಯಲ್ಲಿಟ್ಟುಕೊಂಡರೆ ಅದೃಷ್ಟವೆಂದು ನಂಬಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದು, ಅದನ್ನು ಖರೀದಿಸಲು ಬಂದಿದ್ದ ಮತ್ತಿಬ್ಬರು ಆರೋಪಿಗಳು ಜೊತೆಯಲ್ಲಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಹಾವನ್ನು, ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗಿದ್ದು, ಮಾರುತಿ ಸುಜುಕಿ ಕಾರನ್ನು ಆರೋಪಿಗಳಿಂದ ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ