ತೆಲಂಗಾಣ ಮೂಲದ ಕಳ್ಳರ ಬಂಧನ

Interstate thieves arrested

29-11-2017 362

ಬೆಂಗಳೂರು: ತೆಲಂಗಾಣ ಮೂಲದ ಇಬ್ಬರು ಕುಖ್ಯಾತ ಅಂತರಾಜ್ಯ ಕನ್ನಗಳ್ಳರನ್ನು ಬಂಧಿಸಿರುವ ಕೊಡಿಗೇಹಳ್ಳಿ ಪೊಲೀಸರು 13 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೊತ್ತನೂರಿನ ಸಾರಾಯಿಪಾಳ್ಯದ ಸಮೀರ್‍ಖಾನ್ ಅಲಿಯಾಸ್ ಶೋಯಬ್ (31), ಕೆ.ಜಿ.ಹಳ್ಳಿಯ ವಿನೋಬಾ ನಗರದ ಮೊಹ್ಮದ್ ಫೈರೋಜ್ (30) ಬಂಧಿತ ಆರೋಪಿಗಳಾಗಿದ್ದಾರೆ ಎಂದು, ಈಶಾನ್ಯ ವಲಯದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಬಂಧಿತರಿಂದ 13 ಲಕ್ಷ 50 ಸಾವಿರ ಮೌಲ್ಯದ 440 ಗ್ರಾಂ ತೂಕದ ಚಿನ್ನಾಭರಣಗಳು, ಬೈಕ್, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ತೆಲಂಗಾಣ ಮೂಲದ ಆರೋಪಿಗಳು ನಗರಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ಸಂಪಿಗೆಹಳ್ಳಿ, ವೈಯಾಲಿಕಾವಲ್, ಕೊಡಿಗೇಹಳ್ಳಿ ಇನ್ನಿತರ ಕಡೆಗಳಲ್ಲಿ ಕನ್ನಗಳವು ಮಾಡುತ್ತಿದ್ದರು. ಆಂಧ್ರದ ರಾಜೇಂದ್ರನಗರ, ಶಾಹಿದ್ ನಗರಗಳಲ್ಲೂ ಆರೋಪಿಗಳು ಕನ್ನಗಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುವುದು ವಿಚಾರಣೆಯಲ್ಲಿ ಕಂಡು ಬಂದಿದೆ. ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

Telangana Interstate thieves ಅಂತರಾಜ್ಯ ಬಾಡಿಗೆ ಮನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ