ಡಬಲ್ ಮರ್ಡರ್: ತನಿಖೆಗೆ 4 ತಂಡ

Double Murder: 4 team for investigation

29-11-2017

ಬೆಂಗಳೂರು: ನಗರದ ಮಾರತ್ ಹಳ್ಳಿ ಸಮೀಪದ ಅಶ್ವಥ್ ನಗರದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು, ಗೋವಿಂದನ್ ದಂಪತಿಯನ್ನು ಕೊಲೆಗೈದ ಹಂತಕರ ಪತ್ತೆಗಾಗಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನ (ಬಿಇಎಲ್) ನಿವೃತ್ತ ನೌಕರರಾಗಿದ್ದ ಗೋವಿಂದನ್ ಹಾಗೂ ಅವರ ಪತ್ನಿ ಸರೋಜಮ್ಮ ಅವರನ್ನು ಕೊಲೆಗೈದಿರುವುದು, ಚಿನ್ನಾಭರಣಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಲು ಎನ್ನುವುದು ಮೆಲ್ನೋಟಕ್ಕೆ ಕಂಡುಬಂದಿದೆ.

ಕೃತ್ಯದ ಪತ್ತೆಗಾಗಿ ಇನ್ಸ್ ಪೆಕ್ಟರ್ ಗಳಾದ ಮೊಹಮ್ಮದ್, ಶ್ರೀನಿವಾಸ್ ಅವರನ್ನೊಳಗೊಂಡ ನಾಲ್ಕು ವಿಶೇಶ ತಂಡಗಳನ್ನು ರಚಿಸಲಾಗಿದೆ ಎಂದು ಹೆಚ್ಚವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕೃತ್ಯ ನಡೆಸಿರುವ ದುಷ್ಕರ್ಮಿಗಳು ಬೀರುಗಳಲ್ಲಿರುವ ವಸ್ತುಗಳು ಚಿಲ್ಲಾಪಿಲ್ಲಿಯಾಗಿ ಮಾಡಿದ್ದಾರೆ, ಚಿನ್ನದ ಆಭರಣಗಳನ್ನು ತೆಗೆದುಕೊಂಡು ಬಾಕ್ಸ್ ಗಳನ್ನು ಎಲ್ಲೆಂದರಲ್ಲೇ ಎಸೆದಿದ್ದಾರೆ, ಇದನ್ನು ನೋಡಿದರೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ಹಾಗೂ ನಗದು ಕಳುವಾಗಿರುವುದು ಕಂಡುಬರುತ್ತದೆ ಎಂದು ಹೇಳಿದರು.

ಗೋವಿಂದನ್ ಅವರ ಮಕ್ಕಳು ಬೇರೆಡೆ ನೆಲೆಸಿದ್ದಾರೆ. ಕೆಲದಿನಗಳ ಹಿಂದಷ್ಟೇ ದಂಪತಿಯ ಮೊಮ್ಮಗ, ಮನೆಗೆ ಬಂದು ಜಗಳ ಮಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕುಟುಂಬದ ಕೆಲ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದಾಗಲೂ ಅದೇ ವಿಷಯ ತಿಳಿಸಿದ್ದಾರೆ. ಹೀಗಾಗಿ ಮೊಮ್ಮಗನನ್ನು ವಶಕ್ಕೆ ಪಡೆದಿದ್ದೇವೆ' ಎಂದರು. ಸದ್ಯಕ್ಕೆ ಮೊಮ್ಮಗನಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಮನೆಯ ಮುಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು, ಅದರ ಡಿವಿಆರ್ ಉಪಕರಣ ಪಡೆದು ಪರಿಶೀಲನೆ ನಡೆಸಬೇಕಿದೆ. ಅವಾಗಲೇ ಕೊಲೆಗೆ ನಿಖರ ಸಾಕ್ಷಿ ಸಿಗಬಹುದು' ಎಂದು ಅವರು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ