92 ಕೋಟಿ ದಂಡ ವಸೂಲಿ...!

Traffic police collected 92 cr fine

29-11-2017

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಸುಮಾರು 88.64 ಲಕ್ಷ ಪ್ರಕರಣಗಳನ್ನು ದಾಖಲಿಸಿರುವ ನಗರ ಸಂಚಾರ ಪೊಲೀಸರು ಬರೋಬ್ಬರಿ 92 ಕೋಟಿ 78 ಲಕ್ಷ ರೂಗಳ ದಂಡ ವಸೂಲು ಮಾಡಿದ್ದಾರೆ.

ಕೇವಲ 10 ತಿಂಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯ 88ಲಕ್ಷ 64 ಸಾವಿರ ಪ್ರಕರಣಗಳನ್ನು ದಾಖಲಿಸಿ 92 ಕೋಟಿ 78 ಲಕ್ಷ ರೂಗಳ ದಾಖಲೆ ಪ್ರಮಾಣದ ದಂಡ ವಸೂಲು ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಪ್ರಸಕ್ತ ವರ್ಷ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ ಇದ್ದು ಪೊಲೀಸರು ಇದೇ ಮಾದರಿಯಲ್ಲಿ ಕಾರ್ಯನಿರ್ವಹಣೆ ಮುಂದುವರಿಸಿದರೆ 100 ಕೋಟಿ ದಂಡ ವಸೂಲು ಮಾಡುವ ಸಾಧ್ಯತೆ ಇದೆ. ಇದೊಂದು ದೊಡ್ಡ ಮಟ್ಟದ ಸಾಧನೆ ಕೂಡ ಆಗಲಿದೆ. 2016ರಲ್ಲಿ ಕೂಡ ದೊಡ್ಡ ಮೊತ್ತದ ದಂಡ ವಸೂಲಾಗಿತ್ತು. ಆ ವರ್ಷ 64 ಕೋಟಿ, 96 ಲಕ್ಷ ರೂ. ಮೊತ್ತದ ದಂಡ ವಸೂಲಾಗಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ