ಎಲ್ಲ ಮಹಿಳೆಯರೂ ದುಡಿಯೋ ಮಹಿಳೆಯರೇ..

ivanka trump in hyderabad

29-11-2017

‘ಮನೆಯಲ್ಲೇ ಇರಲಿ ಅಥವ ಹೊರಗೆ ಹೋಗಿ ಕೆಲಸ ಮಾಡುತ್ತಿರಲಿ, ಜಗತ್ತಿನ ಎಲ್ಲ ಮಹಿಳೆಯರೂ ಕೂಡ ದುಡಿಯುವ ಮಹಿಳೆಯರೇ ಆಗಿದ್ದಾರೆ’. ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಬದುಕು ನಡೆಸುತ್ತಿರುವ ಎಲ್ಲ ಭಾರತೀಯ ಮಹಿಳೆಯರಿಗೆ ತುಂಬಾ ಇಷ್ಟವಾಗುವಂಥ ಈ ಮಾತನ್ನು ಹೇಳಿದವರು ಇವಾಂಕ ಟ್ರಂಪ್. ಇವಾಂಕ ಅಮೆರಿಕದ ಅಧ್ಯಕ್ಷ ಡೋನಲ್ಡ್‌ ಟ್ರಂಪ್ ಪುತ್ರಿ. ಹೈದರಾಬಾದಿನಲ್ಲಿ ನಡೆಯುತ್ತಿರುವ ವಿಶ್ವ ಉದ್ಯಮಶೀಲತಾ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಇವಾಂಕ, ಮಹಿಳೆಯರಿಗೂ ಸಮಾನ ಪ್ರಾತಿನಿಧ್ಯ ಸಿಗುವಂತೆ ಮಾಡುವುದು ಒಂದು ಸಾಮಾಜಿಕ ಜವಾಬ್ದಾರಿ. ಇದರ ಜೊತೆಗೆ, ಉದ್ಯಮದ ದೃಷ್ಟಿಯಿಂದಲೂ ಒಳ್ಳೆಯ ವಿಚಾರ ಎಂದು ಹೇಳಿದರು. ಮಹಿಳೆಯರಿಗೆ ಸಂಬಂಧಿಸಿದ ಕಾರ್ಯ ಕ್ಷೇತ್ರಗಳಲ್ಲಿ ಪುರುಷರೂ ಕೆಲಸ ಮಾಡುವಂತಾಗಬೇಕು ಅನ್ನುವುದು ಇವಾಂಕ ಟ್ರಂಪ್ ಅಭಿಪ್ರಾಯ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ