ಪ್ರತಾಪ್ ಸಿಂಹಾಗೆ ಸ್ವಾಮೀಜಿ ಎಚ್ಚರಿಕೆ

Swamiji warns to Pratap Simha

29-11-2017

ಬೆಳಗಾವಿ: ರಾಣಿ ಚನ್ನಮ್ಮ ಮತ್ತು ಒನಕೆ ಒಬ್ಬವ್ವ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನ ವಿಚಾರದ ಕುರಿತು, ಕಿತ್ತೂರು ರಾಜ್ಯ ಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು, ಚನ್ನಮ್ಮ, ಒಬ್ಬವ್ವ ಅವರ ಬಗ್ಗೆ ಕೀಳುಮಟ್ಟದ ಪದ ಬಳಿಸಿದ್ದಾರೆ, ಒಬ್ಬ ಸಂಸದ ಈ ರೀತಿ ಕೀಳುಮಟ್ಟದ ಭಾಷೆ ಬಳಕೆ ಮಾಡಿರುವುದು ನಾಚಿಗೇಡು ಎಂದು ಕಿಡಿಕಾರಿದ್ದಾರೆ.

ಇದನ್ನ ಯಾರೇ ಮಾಡಿದರೂ ಅದು ದೇಶ ಹಾಗೂ ನಾಡದ್ರೋಹದ ಕೆಲಸ. ಪ್ರತಾಪ್ ಸಿಂಹ ಮತ್ತು ಅವರ ಬೆಂಬಲಿಗರಿಗೆ ಎರಡು ದಿನಗಳ ಗಡುವು ನೀಡುತ್ತಿದ್ದು, ಬಹಿರಂಗವಾಗಿ ಕ್ಷೇಮೆ ಕೇಳದಿದ್ದರೆ ಉಗ್ರ ಹೋರಾಟಕ್ಕಿಳಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ