ಪಕ್ಷದಿಂದ ಸೌಭಾಗ್ಯ ಬಸವರಾಜನ್ ಉಚ್ಚಾಟನೆ

Congress: Soubhagya Basavarajan evicted

29-11-2017

ಚಿತ್ರದುರ್ಗ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡದ ಕಾರಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆಯನ್ನು ಕಾಂಗ್ರೆಸ್ ಉಚ್ಚಾಟಿಸಿದೆ. ಚಿತ್ರದುರ್ಗದ  ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿವೈ ಘೋರ್ಪಡೆ ಅವರು, ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.

ಕಳೆದ ನಾಲ್ಕು ತಿಂಗಳಿಂದ ಸೌಭಾಗ್ಯ ಬಸವರಾಜನ್ ಅವರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದವು, ಇದ್ಯಾವುದನ್ನು ಲೆಕ್ಕಿಸದ ಅಧ್ಯಕ್ಷೆ ‘ಸೌಭಾಗ್ಯ ಬಸವರಾಜನ್’ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದುಕೊಂಡು ಬಂದಿದ್ದರು. 5ವರ್ಷದ ಅವಧಿ ಅಧಿಕಾರವನ್ನು ತಲಾ 15ತಿಂಗಳಿನಂತೆ ನಾಲ್ವರು ಮಹಿಳೆಯರಿಗೆ ಹಂಚಿಕೆಗೆ ಒಡಂಬಡಿಕೆ ಮಾಡಲಾಗಿತ್ತು, ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸೌಭಾಗ್ಯ ಬಸವರಾಜನ್, ಅವಧಿ ಮುಗಿದರೂ ಸ್ಥಾನ ಬಿಟ್ಟುಕೊಡದ ಹಿನ್ನೆಲೆ, ಜಿಲ್ಲೆಯ ಶಾಸಕರು ಸಚಿವರು ಹಾಗೂ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರು ಹೈಕಮಾಂಡ್ ಮೊರೆ ಹೋಗಿದ್ದರು. ಈ ಕುರಿತು ಪ್ರತಿಭಟನೆಗಳು ನಡೆದಿದ್ದವು ಆದರೆ ಇದೀಗ ಪಕ್ಷವೇ ಅವರನ್ನು ಉಚ್ಚಾಟಿಸಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ