‘ಸಿಎಂ ಹೆದರಿ ಮನೆಯಲ್ಲಿ ಕೂತಿದ್ದಾರೆ’-ಶೆಟ್ಟರ್

Jagadish shettar vs Siddaramaiah

29-11-2017 334

ಬೆಂಗಳೂರು: ಬಿಜೆಪಿ ಪ್ರತಿಭಟನೆಯಿಂದ ಸಿಎಂಗೆ ಕಸಿವಿಸಿ ಮತ್ತು ಭಯ ಉಂಟಾಗಿದೆ ಎಂದು, ವಿಪಕ್ಷ ನಾಯಕ ಜಗದೀಷ್ ಶೆಟ್ಟರ್ ಹೇಳಿದ್ದಾರೆ. ಈ ಸರ್ಕಾರದ ಅವಧಿ ಮುಗಿಯುತ್ತಾ ಬಂದಿದೆ, ಪರಿವರ್ತನೆ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಟೀಕೆ ಮಾಡುತ್ತಿದ್ದಾರೆ, ಆದರೆ ಪರಿವರ್ತನೆ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿದೆ, ಲಕ್ಷ ಲಕ್ಷ ಜನ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಇದರಿಂದ ಸಿಎಂ ಸಿದ್ದರಾಮಯ್ಯ ಹೆದರಿಕೊಂಡು ಮನೆಯಲ್ಲಿ ಕೂತಿದ್ದಾರೆ ಎಂದು ಛೇಡಿಸಿದ್ದಾರೆ.

ಡಿಸೆಂಬರ್ ನಿಂದ  ಜನಾಶೀರ್ವಾದ ಯಾತ್ರೆಗೆ ಹೊಗುತ್ತೇವೆ ಎಂದು ಹೇಳಿದ್ದರು. ಆದರೆ ಬಿಜೆಪಿ ಪರಿವರ್ತನಾ ಯಾತ್ರೆಗೆ ಹೆದರಿ ಮಾರ್ಚ್ ನಿಂದ ಜನರ ಬಳಿಗೆ ಹೋಗುತ್ತೇವೆ ಎಂದು ಸಿಎಂ ಹೇಳಿದ್ದಾರೆ. ನಮಗೆ ಸಾಕಷ್ಟು ಕೆಲಸವಿದೆ, ಹೀಗಾಗಿ ಮಾರ್ಚ್ ನಿಂದ ಯಾತ್ರೆ ಮಾಡುತ್ತೇವೆ ಎಂಬ ಹೇಳಿಕೆಗೆ, ಹಾಗಾದರೆ ನಾಲ್ಕು ವರ್ಷ ಏನು ಕೆಲಸ ಮಾಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.

ಇನ್ನು ಅರ್ಕಾವತಿ ಬಡಾವಣೆ ಪ್ರಕರಣದ ಕೆಂಪಣ್ಣ ಆಯೋಗದ ವರದಿಯಲ್ಲಿ ಕ್ಲೀನ್ ಚಿಟ್  ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಆದರೆ ಕ್ಲೀನ್ ಚಿಟ್ ಸಿಕ್ಕಿದ್ರೆ ಅಧಿವೇಶನದಲ್ಲಿ ವರದಿ ಏಕೆ ಮಂಡಿಸಿಲ್ಲ ಎಂದಿದ್ದು, ನನಗಿರುವ ಮಾಹಿತಿ ಪ್ರಕಾರ ಅರ್ಕಾವತಿ ಪ್ರಕರಣದ ತನಿಖೆಯ ಕೆಂಪಣ್ಣ ಆಯೋಗ ವರದಿಯಲ್ಲಿ ಸಿಎಂ ಗೆ ಕ್ಲೀನ್ ಚಿಟ್ ಕೊಟ್ಟಿಲ್ಲ, ಸಿಬಿಐ ಗೆ ಶಿಫಾರಸ್ಸು ಮಾಡಿದ್ದಾರೆ ಎಂಬ ಮಾಹಿತಿ ನನಗಿದೆ, ಹೀಗಾಗಿ ವರದಿಯನ್ನು ಸದನದಲ್ಲಿ ಅದನ್ನು ಮಂಡಿಸಿಲ್ಲ ಎಂದು ಶೆಟ್ಟರ್ ಆರೋಪಿಸಿದ್ದಾರೆ.

ಅದಲ್ಲದೇ ಸಂಸದ ಪ್ರತಾಪ್ ಸಿಂಹ ಬೆಂಬಲಿಗರ ಫೇಸ್ ಬುಕ್ ನಲ್ಲಿ ಓಬವ್ವ, ಚೆನ್ನಮ್ಮರಿಗೆ ಅಪಮಾನ ವಿಚಾರದ ಕುರಿತು ಪ್ರತಿಕ್ರಿಸಿ, ಇದು ಕಾಂಗ್ರೆಸ್ ನವರದ್ದೇ ಸಂಚು, ಸಂಸದ ಪ್ರತಾಪ್ ಸಿಂಹ ವಿರುದ್ಧ ಸಂಚು ನಡೆಸಿದ್ದಾರೆ, ಕಾಂಗ್ರೆಸ್ ನಿಂದ ಇಡೀ ವ್ಯವಸ್ಥೆ ಕೆಡಿಸುವ ಕೆಲಸ ಆಗ್ತಿದೆ ಎಂದ ಅವರು, ಫೇಸ್ ಬುಕ್ ನಲ್ಲಿ ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮ ಕುರಿತು ಅವಹೇಳನ ಮಾಡಿದ್ದು ಖಂಡನೀಯ, ಆದರೆ ಈ ಪೋಸ್ಟ್ ಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

ಮಹಾಯಿ ವಿವಾದ ಬಗೆಹರಿಸಲು ಅಮಿತ್ ಷಾ ಮಧ್ಯಸ್ಥಿಕೆ ವಿಚಾರಕ್ಕೆ ಸಂಬಂಧಿಸಿದಂತೆ,  ಮಹಾದಾಯಿ ವಿವಾದ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈ ಬಗ್ಗೆ ಯಾರ ಜೊತೆಗೆ ಮಾತನಾಡಿದ್ದೀವಿ ಹೇಳೋಕಾಗಲ್ಲ, ಆ ವಿಚಾರ ಬಹಿರಂಗಪಡಿಸಿದ್ರೆ ಮತ್ತಷ್ಟು ಸಮಸ್ಯೆ ಸೃಷ್ಟಿ ಆಗುತ್ತವೆ, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೊತೆಗೆ ಮಾತುಕತೆ ನಡೆಸ್ತೇವೆ, ಮಹಾದಾಯಿ ಸಮಸ್ಯೆ ಬಗೆಹರಿದ ನಂತರ ಮಾಧ್ಯಮಗಳ ಮುಂದೆ ಬರುತ್ತೇವೆ ಎಂದು ಹೇಳಿದ್ದಾರೆ.

 

 

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ