ಎಚ್ಡಿಕೆ ಅಭಿಮಾನಿಯ ಉಪವಾಸ ಸತ್ಯಾಗ್ರಹ29-11-2017

ಮಂಡ್ಯ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಭಿಮಾನಿಯೊಬ್ಬರು, ತಮ್ಮ ಮದುವೆಗೆ ಆಗಮಿಸುವಂತೆ ಪಟ್ಟುಹಿಡಿದು ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ. ಘಟನೆಯು ಮಂಡ್ಯದ ಮದ್ದೂರು ತಾಲ್ಲೂಕಿನ, ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇದೇ ಡಿಸೆಂಬರ್ 1 ರಂದು, ಬೆಳ್ಳೂರು ಗ್ರಾಮದ ರವಿ(30) ಎಂಬುವರಿಗೆ ಮದುವೆ ನಡೆಯಲಿದ್ದು, ಇವರು, ಹೆಚ್.ಡಿ ಕುಮಾರ ಸ್ವಾಮಿ ಅವರ ಅಭಿಮಾನಿಯಾಗಿದ್ದಾರೆ. ಇನ್ನು ತನ್ನ ಮದುವೆಗೆ ಎಚ್ಡಿಕೆ ಆಗಮಿಸಲೇಬೇಕೆಂದು ಪಟ್ಟುಹಿಡಿದು ಉಪವಾಸ ಕುಳಿತಿದ್ದಾರೆ.

ಕುಮಾರಸ್ವಾಮಿ ಅವರನ್ನು ಮದುವೆಗೆ ಕರೆಸಲು ಜೆಡಿಎಸ್ ಮುಖಂಡರ ಬಳಿ ಮನವಿ ಮಾಡಿಕೊಂಡಿದ್ದು, ಆದರೆ ಕುಮಾರಸ್ವಾಮಿ ಬರುವ ಬಗ್ಗೆ ಭರವಸೆ ಕೊಡದಿದ್ದರಿಂದ ಮನನೊಂದ ರವಿ, ಲಗ್ನ ಪತ್ರಿಕೆ ಮತ್ತು ಕುಮಾರಸ್ವಾಮಿ ಫೋಟೋ ಮನೆಯ ಮುಂದಿಟ್ಟುಕೊಂಡು ಉಪವಾಸ ಕುಳಿತಿದ್ದಾರೆ. ಅಲ್ಲದೇ ಮದುವೆಗೆ ಬರಲೇಬೇಕು ಎಂದು ಉಪವಾಸ ನಿರತ ರವಿ ಒತ್ತಾಯಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ