ಬಿಜೆಪಿ ಬ್ಯಾನರ್ ಗೆ ಬಸ್ ಡಿಕ್ಕಿ

BJP banner damage

29-11-2017

ವಿಜಯಪುರ: ಬಿಜೆಪಿ ಪರಿವರ್ತನಾ ಯಾತ್ರೆಯ ಸ್ವಾಗತಕ್ಕೆ ಹಾಕಿದ್ದ ಸ್ವಾಗತ ಬ್ಯಾನರ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಬ್ಯಾನರ್ ಹರಿದ ಹೋಗಿದ್ದು, ಈ ಕುರಿತು ಬಿಜೆಪಿ ಕಾರ್ಯಕರ್ತರು ಬಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ರಸ್ತೆಯಲ್ಲಿ ನಡೆದಿದೆ.

ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪರಿವರ್ತನಾ ರಥಯಾತ್ರೆ ಆಗಮಿಸುತ್ತಿದ್ದು, ಮುದ್ದೆಬಿಹಾಳದಲ್ಲಿ ರಥಯಾತ್ರೆಗೆ ಬ್ಯಾನರ್ ಗಳು, ಕಟೌಟ್ ಗಳು ಸಜ್ಜುಗೊಂಡಿದ್ದವು. ಇನ್ನು ಬೆಂಗಳೂರಿನಿಂದ ಮುದ್ದೇಬಿಹಾಳ ನಗರಕ್ಕೆ ಆಗಮಿಸುತ್ತಿದ್ದ ಖಾಸಗಿ ಬಸ್ ಮೇಲಿನ ಲಗೇಜ್ ಬ್ಯಾನರ್ ಗೆ ಬಡಿದ ಪರಿಣಾಮ ಕಟೌಟ್ ಹಾಗು ಬ್ಯಾನರ್ ಗೆ ಧಕ್ಕೆಯಾಗಿದೆ. ಅದಲ್ಲದೇ, ಬಸ್ ಡಿಕ್ಕಿಯಿಂದ ವಿದ್ಯುತ್ ಕಂಬ ನೆಲಕ್ಕುರುಳಿದ್ದು ಯಾವುದೇ ಸಾವು-ನೋವು, ಹಾನಿ, ಸಂಭವಿಸಿಲ್ಲಿ. ಇದರಿಂದ ಭಾರೀ ಅನಾಹುತ ತಪ್ಪಿದೆ.


ಸಂಬಂಧಿತ ಟ್ಯಾಗ್ಗಳು

BJP Banner Parivartan yatra ವಿಜಯಪುರ ಅನಾಹುತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ