ಕಾರ್ ಮಾಲೀಕರೇ ಹುಷಾರ್...!

Be careful car owners..!

29-11-2017

ಬೆಂಗಳೂರು: ಸಿಲಿಕಾನ್​ ಸಿಟಿಯ ವಾಹನ ಮಾಲೀಕರೇ ಹುಷಾರ್, ಮನೆಮುಂದೆ ಕಾರು ನಿಲ್ಲಿಸುವವರೇ ಸ್ವಲ್ಪ ಎಚ್ಚರವಹಿಸಿ, ಇಲ್ಲವಾದಲ್ಲಿ ಬೆಳಗಾಗುವಷ್ಟರಲ್ಲಿ ನಿಮ್ಮ ಕಾರು  ಉಡೀಸ್ ಆಗಬಹುದು. ನಗರದಲ್ಲಿ ಕಾರು ಗ್ಲಾಸ್​ಗಳನ್ನು ಒಡೆದು ವಿಕೃತ ಮೆರೆಯುತ್ತಿರುವ ಕಿಡಿಗೇಡಿಗಳ ಕೃತ್ಯಗಳು ಹೆಚ್ಚುತ್ತಿವೆ.

ಒಂದೇ ವಾರದಲ್ಲಿ, ಎರಡು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳು ದಾಖಲಾಗಿವೆ. ಉತ್ತರ ವಿಭಾಗದ ನಂದಿನಿ ಲೇಔಟ್​ ಠಾಣಾ ವ್ಯಾಪ್ತಿಯಲ್ಲಿ 3ಪ್ರಕರಣಗಳು ಮತ್ತು ಮಹಾಲಕ್ಷ್ಮೀ ಲೇಔಟ್​ನಲ್ಲಿ 2 ಪ್ರಕರಣಗಳು ದಾಖಲಾಗಿವೆ. ಪುಡಾರಿಗಳು ಕಾರ್​ ಗ್ಲಾಸ್​ ಒಡೆಯುವ ದೃಶ್ಯ ಸಿಟಿಟಿಯಲ್ಲಿ ಸೆರೆಯಾಗಿದ್ದು, ದೃಶ್ಯಗಳ ಆಧಾರದ ಮೇಲೆ, ದೇವರಾಜ್​ ಮತ್ತು ಮಂಜು ಎಂಬಿಬ್ಬರು ಆರೋಪಿಗಳನ್ನು ನಂದಿನಿಲೇಔಟ್​ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಿದ್ದಾರೆ. ಇದೇ ಕಿಡಿಗೇಡಿ ಗ್ಯಾಂಗ್​ನಿಂದಲೇ ಸಾಲು-ಸಾಲು ಕಾರ್​ ಗ್ಲಾಸ್​ ಒಡೆದ ಕೃತ್ಯಗಳು ಬೆಳಕಿಗೆ ಬಂದಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Car damage Silicon city ಎಚ್ಚರ ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ