‘ಮಾಂಸ ರಪ್ತು ನಿಷೇಧ ಮಾಡಿ’28-11-2017

ಉಡುಪಿ: ಮಾಂಸ ರಪ್ತು ಮಾಡಿದ ಹಣ ದೇಶಕ್ಕೆ ಬೇಕಾ? ಇದು ದೇಶಕ್ಕೆ ಕಳಂಕ ಪ್ರಾಯ, ಪ್ರಧಾನಿ ಮೋದಿ ಮೇಲೆ ಸಾಧು ಸಂತರಿಗೆ ಅಪಾರ ವಿಶ್ವಾಸವಿತ್ತು, ಅಧಿಕಾರ ಬಂದು ಇಷ್ಟು ಸಮಯವಾದರೂ ಯಾಕೆ ಮಾಂಸ ರಫ್ತು ನಿಷೇಧ ಮಾಡಿಲ್ಲ, ಇದು ನಮ್ಮ ಸಂಶಯಕ್ಕೆ ಎಡೆಮಾಡಿದೆ ಎಂದು, ವಿಶ್ವ ಪ್ರಾಣಿ ಕಲ್ಯಾಣ ಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದ್ದಾರೆ.

ಭಾರತವನ್ನು ಸಂಪೂರ್ಣ ಮಾಂಸ ರಫ್ತು ನಿಷೇಧ ರಾಷ್ಟ್ರವನ್ನಾಗಿ ಮಾಡಿಲ್ಲ, ದೇಶದ ಮಾಂಸಾಹಾರಿಗಳು ಮಾಂಸ ರಫ್ತು ನಿಷೇಧವನ್ನು ಬೆಂಬಲಿಸಿದ್ದಾರೆ ಎಂದ ಅವರು, ನಿಷೇಧ ಮಾಡಲು ಸಮಸ್ಯೆ ಇದ್ದರೆ ಕಾರಣ ಜನರ ಮುಂದಿಡಿ ಇಲ್ಲವೇ ತಕ್ಷಣ ನಿಷೇಧ ಮಾಡಿ ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಮಾಂಸ ಮಾರಾಟ ಮಾಡಿ ದೇಶದ ಸಂಪತ್ತು ಹೆಚ್ಚಿಸುವ ಆಸೆ ನಿಮಗಿದ್ದರೆ ನೀವು ದೇಶದ ಪ್ರಧಾನಿಯಾಗಿರುವುದಕ್ಕೆ ಯೋಗ್ಯರೇ ಎಂದು ನಾವು ಪ್ರಶ್ನಿಸಬೆಕಾಗುತ್ತದೆ ಎಂದಿದ್ದಾರೆ.

ಇನ್ನು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಿ, ಬೌದ್ಧ, ಜೈನ, ಸಿಖ್ ಧರ್ಮದಂತೆ ನಮಗೂ ಮಾನ್ಯತೆ ನೀಡಿ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡುವಂತೆ  ಕೇಂದ್ರಕ್ಕೆ ತಕ್ಷಣ ಶಿಫಾರಸು ಮಾಡಿ, ಇದರಲ್ಲಿ ರಾಜಕೀಯ ಮಾಡಬೇಡಿ ಎಂದ ಅವರು, ವಚನ ಸಾಹಿತ್ಯವೇ ನಮ್ಮ ಧರ್ಮ ಗ್ರಂಥ, ನಾವು ಹಿಂದುಗಳು ಅಲ್ಲ ಎಂದು ಹೇಳಲ್ಲ, ಅಲ್ಪ ಸಂಖ್ಯಾತ ವಿಚಾರವೇ ಬೇರೆ ಪ್ರತ್ಯೇಕ ಧರ್ಮದ ವಿಚಾರವೇ ಬೇರೆ, ಬಸವಣ್ಣ ಕೊಟ್ಟದ್ದು ಜಾತಿ ಅಲ್ಲ ಧರ್ಮ, ಅದನ್ನು ಪರಿಗಣಿಸಿ ಉತ್ತರ ಭಾರತದಲ್ಲಿ ಹುಟ್ಟಿದ ಬೌದ್ಧ, ಜೈನ, ಸಿಖ್ ಧರ್ಮಕ್ಕೆ ಮಾನ್ಯತೆ ಕೊಟ್ಟಿದ್ದೀರಿ, ಆದರೆ ದಕ್ಷಿಣ ಭಾರತದಲ್ಲಿ ಹುಟ್ಟಿದ ಏಕೈಕ ಕನ್ನಡ ನೆಲದ ಧರ್ಮಕ್ಕೆ ಯಾಕೆ ಅವಕಾಶವಿಲ್ಲ ಎಂದು ದಯಾನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Dayananda swaiji Animal Welfare ಮಾಂಸ ರಫ್ತು ಲಿಂಗಾಯತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ