ಕುಖ್ಯಾತ ಕಳ್ಳಿಯರಿಬ್ಬರ ಬಂಧನ

2 women Thieves Detained

28-11-2017

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ನಗರ ಸಾರಿಗೆ ಬಸ್‍ಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಪ್ರಯಾಣಿಕರ ಚಿನ್ನಾಭರಣಗಳು, ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಐನಾತಿ  ಕಳ್ಳಿಯರನ್ನು ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈನ ಕಟ್ಟುಮಡುವಿನ ಅಮುಲು (30), ವಲ್ಲಿ (35) ಬಂಧಿತ ಕಳ್ಳಿಯರು. ಬಂಧಿತರಿಂದ 1 ಲಕ್ಷ 30 ಸಾವಿರ ನಗದು, 120 ಗ್ರಾಂ ಚಿನ್ನಾಭರಣ ಸೇರಿದಂತೆ 3 ಲಕ್ಷ 60 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನಗರದ ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತ ಪ್ರಯಾಣಿಕರ ಜೇಬುಗಳು ಹಾಗೂ ಬ್ಯಾಗ್‍ನಲ್ಲಿರುವ ಹಣ, ಚಿನ್ನಾಭರಣ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು. ಇದಲ್ಲದೆ ಬಸ್ ನಿಲ್ದಾಣಗಳಲ್ಲೂ ಆರೋಪಿಗಳು ಕೈಚಳಕ ತೋರುತ್ತಿದ್ದು, ಖಚಿತ ಮಾಹಿತಿಯಾಧರಿಸಿ ಉಪ್ಪಾರಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಸತೀಶ್ ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ನಗರದ ಇನ್ನೊಂದೆಡ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಶ್ರೀನಗರದ ಮುನೇಶ್ವರ ಬ್ಲಾಕ್‍ನ ಸುಮಿತ್ ಕುಮಾರ್ (25) ಎಂಬಾತನನ್ನು ಬಂಧಿಸಿ 3 ದ್ವಿಚಕ್ರ ವಾಹನಗಳನ್ನು ಉಪ್ಪಾರಪೇಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ನಕಲಿ ಕೀ ಬಳಸಿ ಇಲ್ಲವೆ ಬೈಕ್‍ಗಳ ಹ್ಯಾಂಡಲ್ ಮುರಿದು ಕಳ್ಳತನ ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಅನುಚೇತ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ