‘ಕೆಜೆಪಿ-ಬಿಜೆಪಿಯಲ್ಲಿ ವಿಲೀನವಾಗಿಲ್ಲ’28-11-2017

ಹಾವೇರಿ: ಹಾವೇರಿಯಲ್ಲಿ ಕೆಜೆಪಿ ಪಕ್ಷ ವಿಧಾನ ಸಭಾಚುನಾವಣೆ ರಣಕಹಳೆ ಮೊಳಗಿಸಿದ್ದು, ಪಕ್ಷದ ಸಂಸ್ಥಾಪರಾದ ಪದ್ಮನಾಭ ಪ್ರಸನ್ನ ಕುಮಾರ್, ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ.  

ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಗೊಂದಲದ ಗೂಡಾಗಿವೆ, ಇದರ ಮಧ್ಯೆ ಬಿಜೆಪಿ ಪಕ್ಷ ಕೆಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. ಕೆಜೆಪಿಯು ಬಿಜೆಪಿಯಲ್ಲಿ ವಿಲೀನವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ನಮ್ಮ ಪಕ್ಷ ವಿಲೀನಗೊಂಡಿಲ್ಲ ಎಂದರು. ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ ಕೆಜೆಪಿ ಎಂದು ಅವರು ಹೇಳಿದರು. ನಾವು ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನ  ಕಣಕ್ಕಿಳಿಸುತ್ತೇವೆ, ಗೆಲ್ಲುವುದೇ ನಮ್ಮ ಗುರಿಯಲ್ಲ, ಕನ್ನಡಿಗರ ಸೇವೆ ನಮ್ಮ ಗುರಿ ಎಂದು ಪದ್ಮನಾಭ ಪ್ರಸನ್ನ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Padmanabha Prasanna KJP ಸುದ್ದಿಗೋಷ್ಟಿ ವಿಲೀನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ