ಕ್ಯಾಂಟೀನ್ ಆಯ್ತ...ಈಗ ಇಂದಿರಾ ಕ್ಲಿನಿಕ್?

state govt planing to indira clinic

28-11-2017

ಬೆಂಗಳೂರು: ಇಂದಿರಾ ಕ್ಲಿನಿಕ್ ಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು, ಬಿಎಂಟಿಸಿ ಅಧಿಕಾರಿಗಳ ಜೊತೆ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಚರ್ಚೆ ನಡೆಸಿದ್ದು, ಡಿಸೆಂಬರ್ 2 ರಂದು ಮೆಜೆಸ್ಟಿಕ್ ಹಾಗೂ ಯಶವಂತಪುರ ಟಿಟಿಎಂಸಿಯಲ್ಲಿ ಎರಡು ಸಂಚಾರಿ ಕ್ಲಿನಿಕ್‌ಗಳು ಓಪನ್ ಆಗಲಿವೆ ಎಂದಿದ್ದಾರೆ. ಅದಲ್ಲದೇ ಸಂಚಾರಿ ಕ್ಲಿನಿಕ್‌ಗಳಿಗೆ ಇಂದಿರಾ ಕ್ಲಿನಿಕ್ ಅಂತಾ ಹೆಸರಿಡಲು ನಿರ್ಧಾರ ಮಾಡಿರುವುದಾಗಿಯು ತಿಳಿದು ಬಂದಿದೆ.

ಇಂದಿರಾ ಕ್ಯಾಂಟೀನ್ ಯಶಸ್ವಿ ಬೆನ್ನಲ್ಲೇ, ಇಂದಿರಾ ಸಾರಿಗೆ, ಇಂದಿರಾ ಕ್ಲಿನಿಕ್ ಗಳಿಗೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ. ಇಂದಿರಾ ಕ್ಲಿನಿಕ್ ಗಳಲ್ಲಿ ಪ್ರಯಾಣಿಕರಿಗೆ, ಬಿಎಂಟಿಸಿ ಸಿಬ್ಬಂದಿಗೆ ಉಚಿತ ತುರ್ತು ಚಿಕಿತ್ಸೆ ಸಿಗಲಿದೆ. ಪ್ರಮುಖ ಬಸ್ ನಿಲ್ದಾಣಗಳು, ಟಿಟಿಎಂಸಿಗಳಲ್ಲಿ ಹಂತ ಹಂತವಾಗಿ ಇಂದಿರಾ ಕ್ಲಿನಿಕ್ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ