ವಾಯುಮಾಲಿನ್ಯದಿಂದ ಮಾನಸಿಕ ಖಾಯಿಲೆ…

Mental illness from air pollution...

28-11-2017

ಭಾರತದಲ್ಲಿನ ವಾಯು ಮಾಲಿನ್ಯದ ಸಮಸ್ಯೆ ತೀರಾ ಹದಗೆಡುತ್ತಿದೆ ಮತ್ತು ಇದರಿಂದ ಉಂಟಾಗುವ ಸಮಸ್ಯೆಗಳಿಂದ ಸಾವನ್ನಪ್ಪುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ನವದೆಹಲಿ ಮೂಲದ CSE ಅಂದರೆ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ ಸಂಸ್ಥೆ ವರದಿ ಹೇಳುತ್ತದೆ. ದೇಶದಲ್ಲಿ ಸಂಭವಿಸುವ ಅವಧಿ ಪೂರ್ವ ಸಾವುಗಳು ಅಂದರೆ, ವೃದ್ಧಾಪ್ಯ ಬರುವುದಕ್ಕಿಂತ ಸಾಕಷ್ಟು ಮುಂಚಿತವಾಗಿ ಮರಣಹೊಂದುವರ ಪೈಕಿ, ಶೇ.30ರಷ್ಟು ಜನ ವಾಯುಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದಾರಂತೆ. ಇದರ ಜೊತೆಗೆ, ವಾಯುಮಾಲಿನ್ಯಕ್ಕೂ ಮಾನಸಿಕ ಖಾಯಿಲೆಗಳಿಗೂ ನೇರವಾದ ಸಂಬಂಧವಿದೆ ಎಂದು ಸಿಎಸ್‌ಇ ವರದಿ ಹೇಳುತ್ತದೆ.

ವಾಯುಮಾಲಿನ್ಯದ ಕಾರಣದಿಂದ, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಸಮಾಡುವ ಪ್ರತಿ ಮೂರನೇ ಮಗುವಿನ ಶ್ವಾಸಕೋಶ ಹಾಳಾಗಿದೆ ಎಂದು ವರದಿ ಹೇಳುತ್ತದೆ. ಇದರ ಜೊತೆಗೆ, ಡಯಾಬಿಟಿಸ್ ಖಾಯಿಲೆ ಇರುವವರ ಸಂಖ್ಯೆಯಲ್ಲಿ ಭಾರತ, ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದು, ದೇಶದ ಪ್ರತಿ 12 ಜನರಲ್ಲಿ ಒಬ್ಬರು ಮಧುಮೇಹ ಅಂದರೆ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ.

ಇಷ್ಟೆಲ್ಲಾ ಆದಮೇಲಾದರೂ ನಮ್ಮ ಸರ್ಕಾರಗಳು ಮತ್ತು ಅವರಿಗಿಂತ ಮುಖ್ಯವಾಗಿ ನಾಗರಿಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಎಲ್ಲೇ ಆಗಲಿ, ಯಾರೇ ಆಗಲಿ ಪ್ಲಾಸ್ಟಿಕ್ ಸೇರಿರುವ ತ್ಯಾಜ್ಯಕ್ಕೆ ಬೆಂಕಿ ಇಡುತ್ತಿದ್ದರೆ ಅದನ್ನು ತಪ್ಪಿಸಬೇಕೇ ಹೊರತು ನೋಡಿಕೊಂಡು ಸುಮ್ಮನಿರಬಾರದು. ನಮ್ಮ ನಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಸಾಧ್ಯವಾದಷ್ಟೂ ಸ್ವಂತ ವಾಹನಗಳನ್ನು ಮನೆಯಲ್ಲೇ ಬಿಟ್ಟು ಸಮೂಹ ಸಾರಿಗೆ ಅಂದರೆ, ಬಸ್ಸು, ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸಬೇಕು. ನಮ್ಮ ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎನ್ನುವುದನ್ನು ಈಗಲಾದರೂ ಅರ್ಥಮಾಡಿಕೊಳ್ಳಬೇಕು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ