ನಿಧಿಗಾಗಿ ಶೋಧ...!

Thieves search for treasure ...!

28-11-2017

ವಿಜಯಪುರ: ನಿಧಿ ಆಸೆಗಾಗಿ, ವಿಜಯಪುರದಲ್ಲಿ ನೆಲ ಅಗೆದ ಕಿಡಿಗೇಡಿಗಳು, ಆ ಜಾಗದಲ್ಲಿದ್ದ ಚಿಕ್ಕದಾದ ಬಸವಣ್ಣನ ಮೂರ್ತಿಯನ್ನು ಕಿತ್ತೆಸೆದು ಶೋಧ ನಡೆಸಿದ್ದಾರೆ. ವಿಜಯಪುರ ನಗರದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಘಟನೆ ನಡೆದಿದೆ. ಎಸ್.ವಿ. ಪಾಟೀಲ್ ಎಂಬುವವರಿಗೆ ಸೇರಿದ ಖಾಲಿ ಜಾಗದಲ್ಲಿ ಅಗೆದು ಹುಡುಕಿದ್ದಾರೆ. ಸುಮಾರು ಎಂಟು ಅಡಿಗಳಷ್ಟು ಆಳಕ್ಕೆ ಅಗೆದು, ಶೋಧಿಸಿದ್ದಾರೆ. ಆದರೆ ಕಳ್ಳರಿಗೆ ನಿಧಿ ಸಿಗದಿದ್ದು, ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಕಳೆದ ರಾತ್ರಿ ಘಟನೆ ನಡೆದಿದ್ದು, ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Treasure mischievous ವಿಜಯಪುರ ಗೋಳಗುಮ್ಮಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ