ಕುಲಕರ್ಣಿ ಬೆಂಬಲಕ್ಕೆ ಎಂ.ಬಿ ಪಾಟಿಲ್

M.B patil supported vinay kulkarni

28-11-2017 287

ವಿಜಯಪುರ: ಯಡಿಯೂರಪ್ಪ, ವಿನಯ್ ಕುಲಕರ್ಣಿ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ, ಬಿಜೆಪಿ ನಾಯಕರಿಗೆ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳು ಸಿಕ್ಕಿಲ್ಲ, ಆದ್ದರಿಂದ ವಿನಯ್ ಕುಲಕರ್ಣಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು, ನೀರಾವರಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ವಿಜಯಪುರದಲ್ಲಿಂದು ಮಾತನಾಡಿದ ಅವರು, ಯೋಗಿಶ್ ಗೌಡ ಒಬ್ಬ ರೌಡಿ ಶೀಟರ್, ಅವರ ವಿರುದ್ಧ 29 ಕೇಸುಗಳಿವೆ, ಆತನ ಸಹೋದರ ಗುರುನಾಥ ಗೌಡ ವಿರುದ್ಧವು ಸಹ 9ಪ್ರಕರಣಗಳಿವೆ. ಇವರ ಮನೆಯ ಮೇಲೆ ದಳಿ ವೇಳೆ ಪಿಸ್ತೂಲ್, ತಲ್ವಾರ ಸಿಕ್ಕಿವೆ, ಇಂತಹ ವ್ಯಕ್ತಿಗಳು ವಿವಿಧ ಕಾರಣಗಳಿಂದ ಹತ್ಯೆ ಯಾಗಿರಬೇಕು, ಇದಕ್ಕೂ ವಿನಯ್ ಕುಲಕರ್ಣಿಗೂ ಸಂಬಂಧ ಕಲ್ಪಿಸಲಾಗುತ್ತಿದೆ ಎಂದರು.

ವಿನಯ್ ಕುಲಕರ್ಣಿ ಓರ್ವ ಯುವ ನಾಯಕ. ಹೈನುಗಾರಿಕೆ ಮೂಲಕ ವಿನಯ್ ಕುಲಕರ್ಣಿ ನೂರಾರು ಜನರಿಗೆ ಆಸರೆಯಾಗಿದ್ದಾರೆ. ಆದರೆ ಬಿಎಸ್ ವೈ,  ಪ್ರಲ್ಹಾದ ಜೋಶಿ, ಜಗದೀಶ್ ಶಟ್ಟರ್ ಕುಲಕರ್ಣಿ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಲ್ಹಾದ ಜೋಶಿ ಆ್ಯಂಡ್ ಟೀಮ್ ವಿನಯ್ ಕುಲಕರ್ಣಿ ವಿರುದ್ದ ಕೆಟ್ಟದಾಗಿ ಪತ್ರ ಬರೆಯುತ್ತಿದೆ. ನಾನು ಹಾಗೂ ಕಾಂಗ್ರೆಸ್ ಪಕ್ಷ ವಿನಯ್ ಕುಲಕರ್ಣಿ ಪರವಾಗಿದ್ದೇವೆ, ವಿನಯ್ ಕುಲಕರ್ಣಿ ಲಿಂಗಾಯತ ಹೋರಾಟದ ಯುವ ನಾಯಕರಾಗಿದ್ದಾರೆ. ಜನರಿಗೆ ಯೋಗಿಶ್ ಗೌಡ ಹಿನ್ನೆಲೆ ಬಗ್ಗೆ ಗೊತ್ತಿದೆ ಎಂದರು.

ಕೇಂದ್ರದ 17 ಸಚಿವರ ವಿರುದ್ಧ ಆರೋಪಗಳಿವೆ. ಬಿ.ಎಸ್ ವೈ ಅವರ ರಾಜೀನಾಮೆಯನ್ನು ಕೇಳಲಿ, ಬಿ.ಎಸ್ ವೈ ಸಿಎಂ ಆಗಿದ್ದಾಗ, ಕಮೀಷನ್ ಕೆಲಸ ಮಾಡಿದ್ದಾರೆ. ಬಿ.ಎಸ್ ವೈ ಇದ್ದಹಾಗೇ ಎಲ್ಲರೂ ಇರ್ತಾರೆ ಅಂತಾ ಅಂದುಕೊಂಡಿದ್ದಾರೆ, ನಮ್ಮ ಸರ್ಕಾರ ಯಾವುದೇ ಕಮಿಷನ್ ಕೆಲಸ ಮಾಡಿಲ್ಲ. ನನ್ನ ವಿರುದ್ಧ ಸಣ್ಣ ಪದದ ಭಾಷೆ ಬಳಕೆ ಮಾಡಬೇಡಿ ಎಂದು ಗುಡುಗಿದರು.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ