'ಸರಕಾರಿ ಕಾಲೇಜಲ್ಲಿ ಓದಿದ ವೈದ್ಯರೆಲ್ಲಿ’

They need govt seat..Not for service

28-11-2017

ಕಲಬುರಗಿ: ಖಾಸಗಿ ವೈದ್ಯರ ವಿರುದ್ಧ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಅವರು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಖಾಸಗಿ ವೈದ್ಯರು ಕೆಪಿಎಮ್ಇ ಕಾಯಿದೆ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳದ ಹಿನ್ನೆಲೆ ಇಷ್ಟೆಲ್ಲಾ ಆವಾಂತರಗಳಿಗೆ ಕಾರಣವಾಯಿತು ಎಂದರು. ಕಾಯಿದೆಯಲ್ಲಿನ ವಿಷಯಗಳನ್ನು ತಿಳಿದುಕೊಳ್ಳದೇ ಮುಷ್ಕರಕ್ಕೆ ಇಳಿದರು ಅಂತ ಹೇಳಬಲ್ಲೇ ಎಂದರು.

ಮೆಡಿಕಲ್ ಕಾಲೇಜುಗಳು ಇರೋದು ಸರಕಾರದ್ದು, ಆದರೆ ಸರಕಾರ ಆಸ್ಪತ್ರೆಗಳಲ್ಲಿಯೇ ವೈದ್ಯರ ಹುದ್ದೆಗಳು ಖಾಲಿ ಇವೆ, ಅದು ನಮ್ಮ ದುರ್ದೈವ, ಸೀಟು ಬೇಕು ಅಂದ್ರೆ ಮಾತ್ರ ಸರಕಾರಿ ಮೆಡಿಕಲ್ ಕಾಲೇಜು ಬೇಕು,  ಕೆಲಸ ಮಾಡೋದಕ್ಕೆ ಮಾತ್ರ ಒಲ್ಲೇ ಎನ್ನುತ್ತಾರೆ, ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಓದಿದ ವೈದ್ಯರು ಎಲ್ಲಿ ಹೋದರು, ಸಿಎಂ ಸಿದ್ದರಾಮಯ್ಯ ನಾವು ಬಚ್ಚಿಟ್ಟುಕೊಂಡಿದ್ದೇವಾ ಎಂದು ಆವೇಶದಿಂದ ನುಡಿದರು. ಆಹಾರ ಉತ್ಪಾದನೆ ಇಲ್ಲಿಯೇ ಹೆಚ್ಚು, ಆದರೆ ದರಿದ್ರ ಹೆಚ್ಚಾಗಿ ಇರೋದು ಇಲ್ಲಿಯೇ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಕೆಪಿಎಮ್‌ಇ ಕಾಯ್ದೆ ಮಂಡನೆಯಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರ ದೊಡ್ಡದು, ಸಿಎಂ ಇಲ್ಲದಿದ್ದಲ್ಲಿ ಕಾಯ್ದೆ ಮಂಡನೆ ಕ್ಲಿಷ್ಟಕರವಾಗಿತ್ತು ಎಂದ ರಮೇಶ್ ಕುಮಾರ್, ಕಪಿಎಮ್‌ಇ ಕಾಯ್ದೆ ಮಂಡನೆಯಿಂದ ನನ್ನ ಭಾರ ಕಡಿಮೆಯಾಗಿದೆ, ಈ ವಿಚಾರದಲ್ಲಿ ಸಿದ್ದರಾಮಯ್ಯನವರಿಗೆ ಅಭಾರಿಯಾಗಿದ್ದೇನೆ, ಈ ಕಾಯ್ದೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಅಂಶಗಳಿವೆ ಎಂದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ