ಮಹಿಳಾ ಟೆಖಿಗೆ ಲೈಂಗಿಕ ಕಿರುಕುಳ

Sexual harassment in company

28-11-2017

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಟೆಖಿಗೆ ತಾನು ಕಾರ್ಯನಿರ್ವಹಿಸುತ್ತಿದ್ದ ಕಂಪನಿಯ ಟೀಂ ಲೀಡರ್ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ತಿಳಿದು ಬಂದಿದೆ.

ಬೆಂಗಳೂರಿನ ಎಕೋಸ್ಪೇಸ್ ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ, ಟೀಮ್ ಲೀಡರ್ ಆದ ಧೀರಜ್ ಶೆಟ್ಟಿ ಎಂಬುವರು, ಮಹಿಳಾ ಟೆಖಿಯ ಸೊಂಟ ಮುಟ್ಟಿ, ಮತ್ತು ಹಿಂಬದಿ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ನೊಂದ ಯುವತಿಯಿಂದ ಮೊದಲಿಗೆ ಕಂಪನಿಯಲ್ಲಿ ದೂರು ನೀಡಿದ್ದಾರೆ. ಆದರೆ ಕಂಪನಿಯ ತನಿಖೆಯಲ್ಲಿ ನ್ಯಾಯ ಸಿಕ್ಕಿಲ್ಲವೆಂದು ಆರೋಪಿಸಿ, ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sexual Harassment Eco space ಟೀಂ ಲೀಡರ್ ಪೊಲೀಸ್ ಠಾಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ