ಜಯಲಲಿತಾ ‘ಪುತ್ರಿ’ ಅರ್ಜಿ ವಜಾ…!

Jayalalithaa

27-11-2017

ನಾನು ಜಯಲಲಿತಾ ಹೊಟ್ಟೆಯಲ್ಲಿ ಹುಟ್ಟಿದ ಮಗಳು, ಅದನ್ನು ಸಾಧಿಸಲು ನನ್ನ ಡಿಎನ್‌ಎ ಅನ್ನು  ಜಯಲಲಿತಾ ಡಿಎನ್‌ಎ ಜೊತೆ ಹೋಲಿಸಿ ನೋಡಲು ಆದೇಶಿಸಬೇಕು ಎಂದು ಬೆಂಗಳೂರಿನ ಅಮೃತ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಸಂವಿಧಾನ 32ನೇ ವಿಧಿಯ ಅನುಸಾರ, ಇಂಥ ಒಂದು ಕೋರಿಕೆಯನ್ನು ಮಾನ್ಯಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಅಮೃತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಬದುಕಿದ್ದಾಗ, ನಾನು ಜಯಾ ಸೋದರಿ ಶೈಲಜಾ ಪುತ್ರಿ ಎಂದು ಹೇಳಿಕೊಂಡಿದ್ದ ಅಮೃತ, ಜಯಲಲಿತಾ ತೀರಿಕೊಂಡ ನಂತರ, ನಾನು ಜಯಲಲಿತಾ ಅವರ ಮಗಳು ಎಂದು ಹೇಳಿಕೆ ನೀಡಿದ್ದರು. ನಾನು, ಜಯಲಲಿತಾ ಮತ್ತು ತೆಲುಗು ಚಿತ್ರ ನಟ ಶೋಭನ್ ಬಾಬು ಅವರ ಪ್ರೇಮದ ಫಲ. ಚೆನ್ನೈನ ಮೈಲಾಪುರದಲ್ಲಿ ಹುಟ್ಟಿದೆ, ಆದರೆ ಈ ವಿಚಾರವನ್ನು ತುಂಬಾ ರಹಸ್ಯವಾಗಿಡಲಾಗಿತ್ತು ಎಂದು ಅಮೃತ ಹೇಳಿಕೊಂಡಿದ್ದರು. 


ಸಂಬಂಧಿತ ಟ್ಯಾಗ್ಗಳು

Jayalalithaa Supreme court ಡಿಎನ್‌ಎ ಮೈಲಾಪುರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ