ಮುಸ್ಲಿಮರು ಶ್ರೀರಾಮನ ವಂಶಸ್ಥರು…?

Muslims are descendants of Sriram...?

27-11-2017

ಭಾರತದ ಮುಸ್ಲಿಮರು ಶ್ರೀರಾಮನ  ವಂಶಸ್ಥರಂತೆ…ಯಾರಪ್ಪಾ ಈ ಅದ್ಭುತವಾದ ವಿಚಾರ ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿ ಮಾಡಿರೋ ಮಹಾಶಯ ಅಂದ್ರಾ…?

ಈ ಮಾತನ್ನು ಹೇಳಿರುವವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರೋ ಗಿರಿರಾಜ್ ಸಿಂಗ್ ಅವರು. ರಾಜಸ್ತಾನದ ಜೋಧ್‌ಪುರದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಿದ್ದ ಗಿರಿರಾಜ್ ಸಿಂಗ್, ‘ಭಾರತದ ಎಲ್ಲ ಹಿಂದೂಗಳು ಮತ್ತು ಮುಸ್ಲಿಮರು ಒಂದೇ ವರ್ಗದ ಪೂರ್ವಜರ ಸಂತಾನವೇ ಹೊರತು, ಭಾರತದ ಯಾವುದೇ ಮುಸ್ಲಿಮ್ ವ್ಯಕ್ತಿ ಬಾಬರನ ವಂಶಸ್ಥನಲ್ಲ’ ಎಂದರು. ಬಳಿಕ, ‘ಅಯೋಧ್ಯೆಯ ರಾಮ ಮಂದಿರದ ವಿಚಾರ ನಮ್ಮ ಪೂರ್ವಿಕರದ್ದು, ನಮ್ಮ ಧಾರ್ಮಿಕ ವಿಚಾರಗಳು ಬೇರೆ ಇದ್ದರೂ ಕೂಡ, ನಮ್ಮ ಪೂರ್ವಜರು ಒಬ್ಬರೇ ಆಗಿದ್ದಾರೆ’. ಹೀಗಾಗಿ, ಶಿಯಾ ವಕ್ಫ್ ಬೋರ್ಡ್‌ನವರಂತೆಯೇ ಸುನ್ನಿ ಸಂಪ್ರದಾಯದ ಮುಸ್ಲಿಮರೂ ಕೂಡ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿಕೊಂಡರು.‘ ಮತ್ತೂ ಮುಂದುವರಿದ ಸಚಿವ ಗಿರಿರಾಜ್ ಸಿಂಗ್ ‘ಭಾರತದಲ್ಲಿ ಅಲ್ಲದೆ, ಪಾಕಿಸ್ತಾನದಲ್ಲಿ ರಾಮ ಮಂದಿರ ಕಟ್ಟಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ವಿವಾದಾತ್ಮ ಹೇಳಿಕೆಗಳ ಸರದಾರರಾಗಿರುವ ಗಿರಿರಾಜ್ ಸಿಂಗ್, ಈ ಹಿಂದೆ, ‘ನರೇಂದ್ರ ಮೋದಿ ವಿರೋಧಿಸೋರಿಗೆ ಭಾರತದಲ್ಲಿ ಸ್ಥಾನ ಇಲ್ಲ…ಲೋಕಸಭಾ ಎಲೆಕ್ಷನ್ ಆದ ಮೇಲೆ ಮೋದಿ ವಿರೋಧಿಗಳೆಲ್ಲಾ ಪಾಕಿಸ್ತಾನಕ್ಕೆ ಹೋಗಬೇಕಾಗುತ್ತೆ ಅಂದಿದ್ರು’. ಆಮ್ ಆದ್ಮಿ ಪಕ್ಷ಼ದ ಅರವಿಂದ್ ಕೇಜ್ರಿವಾಲ್, ರಾಮಾಯಣದಲ್ಲಿ ಬರೋ ರಾಕ್ಷಸ ಮಾರೀಚನ ಹಾಗೆ ಮಾಯಾವಿ ಅಂತಲೂ ಅಂದಿದ್ರು. ಒಟ್ಟಿನಲ್ಲಿ, ಬಿಹಾರದ ನವಾಡ ಕ್ಷೇತ್ರದ ಎಂ.ಪಿ ಆಗಿರೋ ಈ ರಾಜಕಾರಣಿ, ವಿವಾದಾತ್ಮ ಹೇಳಿಕೆಗಳ ಸರದಾರನೆಂದೇ ಕುಖ್ಯಾತನಾಗಿರುವುದಂತೂ ನಿಜ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ