‘ಸಿಸಿಟಿವಿ ದೃಶ್ಯಗಳಿದ್ದರೂ ಕಳ್ಳರನ್ನು ಬಂಧಿಸಿಲ್ಲ’

Thieves and shop robbery

27-11-2017

ಬೆಂಗಳೂರು: ರಾಜಾಜಿನಗರದಲ್ಲಿ ಕಳೆದ ಕೆಲ ದಿನಗಳಿಂದ ಒಂದರ ಹಿಂದೆ ಒಂದು ಅಂಗಡಿಗಳ ಕಳವು ಪ್ರಯತ್ನಗಳು ನಡೆಯುತ್ತಿದ್ದು, ದುಷ್ಕರ್ಮಿಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟ ಸಾಧ್ಯವಾಗಿದೆ. ಕಳವು ದೃಶ್ಯಗಳು ಹತ್ತಿರದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮಾರಗಳಲ್ಲಿ ದಾಖಲಾಗಿದ್ದರೂ ರಾಜಾಜಿನಗರ ಪೊಲೀಸರಿಗೆ ಕಳ್ಳರನ್ನು ಪತ್ತೆಹಚ್ಚುವುದು ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ.

ರಾಜಾಜಿನಗರದ ಜೈ ಮಾರುತಿ ಸ್ಟೇಷನರಿ ಅಂಗಡಿಯೊಂದರ ಬಳಿ ಕಳೆದ ನ.24ರಂದು ಮಧ್ಯರಾತ್ರಿ ಬಂದಿರುವ ಕಳ್ಳರು ರೋಲಿಂಗ್ ಶಟರ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಅಂಗಡಿ ಮಳಿಗೆಯ ಮೇಲಿನ ಮನೆಯವರು ಕೂಗಿಕೊಂಡಾಗ ಓಡಿ ಹೋಗಿದ್ದಾರೆ. ಇನ್ನೂ ಅಮ್ಮಾಸ್ ಪೇಸ್ಟ್ರಿ ಬೇಕರಿಯಲ್ಲಿ ಒಳಗೆ ಕಾರ್ಮಿಕರು ಮಲಗಿರುವ ಅರಿಯದ ಮೂವರು ಮಾಸ್ಕ್ ಧರಿಸಿದ್ದ ಖದೀಮರು ಮೆಲ್ಲಗೆ ಶಟರ್ ಎತ್ತಿದ್ದಾರೆ. ಒಳಗೆ ಸಿಬ್ಬಂದಿ ಇರೋದನ್ನು ನೋಡಿ ತಕ್ಷಣವೇ ಪರಾರಿಯಾಗಿದ್ದಾರೆ.

ರಾಜಾಜಿನಗರದ ಶ್ರೀ ಗಜಾನನ ಫ್ರೂಟ್ ಜ್ಯೂಸ್ ಸೆಂಟರ್ ಗೆ  ಖದೀಮನೊಬ್ಬ ಬೀಗ ಮುರಿದು ಶಟರ್ ಒಳ ಹೋಗುತ್ತಾನೆ. ಆದರೆ ಅಲ್ಲಿದ್ದದ್ದು 10 ರೂಪಾಯಿ ಮಾತ್ರ. ನಂತರ ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಸ್ ಹೋಗಿದ್ದಾನೆ. ಕಳೆದ ತಿಂಗಳ ಹಿಂದೆ ರಾಜಾಜಿನಗರದ ಮಾತೃಶ್ರೀ ಮೆಡಿಕಲ್ಸ್ ಶಟರ್ ಮುರಿದು 35 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ, ಇವೆಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದರೂ ಪ್ರಕರಣ ದಾಖಲಿಸಿರುವ ರಾಜಾಜಿನಗರ ಪೊಲೀಸರಿಗೆ ಕಳ್ಳರನ್ನು ಹಿಡಿಯಲು ಸಾಧ್ಯವಾಗದಿರುವುದರಿಂದ ವ್ಯಾಪಾರಿಗಳು ಆತಂಕಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

CCTV Footage ಸ್ಟೇಷನರಿ ಫ್ರೂಟ್ ಜ್ಯೂಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ