ಧಾರವಾಡದ ಯೋಧ ಹುತಾತ್ಮ

CRPF soldier martyr

27-11-2017

ಧಾರವಾಡ: ನಕ್ಸಲರ ಜೊತೆಗಿನ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಯೋಧ ಮಂಜುನಾಥ ಜಕ್ಕಣ್ಣವರ ಹುತಾತ್ಮರಾಗಿದ್ದಾರೆ. ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದ ಮಂಜುನಾಥ ಜಕ್ಕಣ್ಣವರ(31) ಅವರು, ಮನಗುಂಡಿ ಗ್ರಾಮದ ಶಿವಲಿಂಗಪ್ಪ-ರತ್ನವ್ವ ದಂಪತಿ ಮಗನಾಗಿದ್ದು, 10 ವರ್ಷದ ಹಿಂದೆ ಸಿ.ಆರ್.ಪಿ.ಎಫ್ಗೆ ಸೇರಿದ್ದರು. ಇನ್ನು ನಿನ್ನೆ ನಕ್ಸಲರ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ, ಗಾಯಗೊಂಡಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ. ಮಂಜುನಾಥ ಅವರು, 113 ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹುತಾತ್ಮ ಯೋಧ ಮಂಜುನಾಥ ಕಳೆಬರ ನಾಳೆ ಧಾರವಾಡಕ್ಕೆ ಬರುವ ಸಾಧ್ಯತೆ ಇದ್ದು, ಯೋಧನ ಅಗಲಿಕೆಗೆ ಸಂಬಂಧಿಕರಲ್ಲದೇ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.


ಸಂಬಂಧಿತ ಟ್ಯಾಗ್ಗಳು

Naxalite Soldier ಹುತಾತ್ಮ ಸಿ.ಆರ್.ಪಿ.ಎಫ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ