6 ಕಾರುಗಳ ಗಾಜು ಪುಡಿ-ಪುಡಿ

Car glass broken by perpetrators

27-11-2017

ಬೆಂಗಳೂರು: ಬಿಬಿಎಂಸಿ ಸದಸ್ಯರೊಬ್ಬರ ಕಾರು ಸೇರಿ ಮನೆಗಳ ಮುಂಭಾಗ ನಿಲ್ಲಿಸಿದ್ದ 6 ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ನಿನ್ನೆ ಮಧ್ಯರಾತ್ರಿ, ನಂದಿನಿ ಲೇಔಟ್ ಹಾಗೂ ಮಹಾಲಕ್ಷ್ಮಿ ಲೇಔಟ್‍ನಲ್ಲಿ ನಡೆದಿದೆ.

ನಂದಿನಿ ಲೇಔಟ್ ಬಿಬಿಎಂಪಿ ಸದಸ್ಯ ರಾಜೇಂದ್ರಕುಮಾರ್ ಅವರ ಎಕ್ಸ್ ಯುವಿ 500, ಆರ್‍ಟಿಓ ಅಧಿಕಾರಿಯೊಬ್ಬರ ಕಾರು ಹಾಗೂ ಪ್ರೇಸ್ ಬೋರ್ಡ್ ಹಾಕಿರುವ ಮತ್ತೊಂದು ಕಾರು ಸೇರಿ 6 ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಮಹಾಲಕ್ಷ್ಮಿ ಲೇಔಟ್‍ನ ಸತ್ಯನಾರಯಣಪೇಟೆ ಹಾಗೂ ನಂದಿನಿ ಲೇಔಟ್‍ನಲ್ಲಿ ಮಧ್ಯರಾತ್ರಿ ಈ ಕೃತ್ಯ ನಡೆದಿದ್ದು, ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾತೋರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸಿಸಿ ಟಿವಿ ಕ್ಯಾಮಾರಾಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BBMP member Layout ಪುಡಿ ಪುಡಿ ಪರಿಶೀಲನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ