ಹೆಂಡತಿಯನ್ನೇ ಕೊಂದ ಗಂಡ..

husband killed wife

27-11-2017

ಬೆಂಗಳೂರು: ತನ್ನ ಪತ್ನಿಯು ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು, ಜಗಳ ತೆಗೆದ ಪತಿ ಆಕೆಯ ಕತ್ತು ಹಿಸುಕಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಕೊಲೆ ಮಾಡಿರುವ ಘಟನೆಯು ನಗರದ ಬನಶಂಕರಿಯ ಪದ್ಮನಾಭ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಪದ್ಮನಾಭ ನಗರದ ಇಂದಿರಾ (35)ಎಂದು  ಕೊಲೆಯಾದವರನ್ನು ಗುರುತಿಸಲಾಗಿದೆ. ಆಕೆಯನ್ನು ಕೊಲೆಗೈದ ಪತಿ ಮಲ್ಲೇಶ್‍ನನ್ನು ಬನಶಂಕರಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ದಕ್ಷಿಣ ವಲಯದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.

ಏರ್ ಟೆಲ್ ಕಂಪನಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ಮಲ್ಲೇಶ್‍ನನ್ನು 10 ವರ್ಷಗಳ ಹಿಂದೆ ಇಂದಿರಾ ವಿವಾಹವಾಗಿದ್ದು, ದಂಪತಿಗೆ 9 ವರ್ಷದ ಹೆಣ್ಣು ಮಗಳಿದ್ದಾಳೆ. ಮಗಳನ್ನು ಮಲ್ಲೇಶ್ ಕೆಂಗೇರಿಯ ತನ್ನ ಅಮ್ಮನ ಮನೆಯಲ್ಲಿ ಬಿಟ್ಟಿದ್ದ. ಹೆಚ್‍ಸಿಜಿ ಆಸ್ಪತ್ರೆಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ ಇಂದಿರಾ ಅವರೊಂದಿಗೆ ಇತ್ತೀಚೆಗೆ ಮಲ್ಲೇಶ್ ವೈಮನಸ್ಸು ಹೊಂದಿದ್ದರು. ಪತ್ನಿಯು ಬೇರೊಬ್ಬನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾರೆ ಎಂದು ಆಗಾಗ ಜಗಳ ತೆಗೆಯುತ್ತಿದ್ದ. ಮಧ್ಯ ರಾತ್ರಿ ದಂಪತಿ ನಡುವೆ ಇದೇ ವಿಚಾರದಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿದೆ.

ಆಕ್ರೋಶಗೊಂಡ ಮಲ್ಲೇಶ್, ಪತ್ನಿಯ ಕತ್ತು ಹಿಸುಕಿ ನಂತರ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬೆಳಿಗ್ಗೆ 8.45ರ ಸಮಯ ಕಳೆದರೂ ಬಾಗಿಲು ತೆಗೆಯದಿದ್ದರಿಂದ ಅಕ್ಕಪಕ್ಕದ ಮನೆಯವರು ಬಾಗಿಲು ಬಡಿದು ನೋಡಿದಾಗ ಇಂದಿರಾ ಕೊಲೆಯಾಗಿರುವುದು ಕಂಡುಬಂದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಬನಶಂಕರಿ ಪೊಲೀಸರು, ಮಲ್ಲೇಶ್‍ನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

crime Murder ಅನೈತಿಕ ಸಂಬಂಧ ಬನಶಂಕರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ