‘ನಮ್ಮ ಬೆಳವಣಿಗೆ ಕಂಡು ಬಿಜೆಪಿ‌ಗೆ ಹತಾಶೆ’



27-11-2017 215

ಹುಬ್ಬಳ್ಳಿ: ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರ್ಕಾರ 2 ರೂಪಾಯಿ 50 ಪೈಸೆಗೆ ವಿದ್ಯುತ್ ನೀಡಲು ಮುಂದಾದರೆ, ನನ್ನ ವೈಯಕ್ತಿಕ ಕೆಲಸ ಬಿಟ್ಟು ಅವರ ಹಿಂದೆ ಅಲೆಯುವೆ ಎಂದಿದ್ದಾರೆ. ಅಲ್ಲದೇ ಒಂದು ವೇಳೆ ಕೇಂದ್ರ ಸರ್ಕಾರ 2.50 ದರದಲ್ಲಿ ವಿದ್ಯುತ್ ನೀಡಿದರೆ, ಎಲ್ಲ ಖರೀದಿ ಪ್ರಕ್ರಿಯೆ ರದ್ದು ಮಾಡುವೆ ಎಂದು ತಿಳಿಸಿದ್ದಾರೆ.

ಇನ್ನು ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಬಿಜೆಪಿಯವರು ಮಾಡುತ್ತಿರೋ ಸುಳ್ಳು ಆರೋಪ, ನಮ್ಮ ಯಾವೊಬ್ಬ ಸಚಿವರೂ ಅಕ್ರಮವನ್ನು ಎಸಗಿಲ್ಲ, ಅವರು ನಮ್ಮ ಬೆಳವಣಿಗೆಯನ್ನು ಕಂಡು‌ ಹತಾಶರಾಗಿದ್ದಾರೆ, ಹಾಗಾಗಿ ಸಚಿವ ಕೆ.ಜೆ.ಜಾರ್ಜ್‌ ಹಾಗೂ ವಿನಯ ಕುಲಕರ್ಣಿ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನನ್ನ ಮೇಲೆ ಐಟಿ ದಾಳಿ ನಡೆದಾಗ ಅದೊಂದು ದೇಶದ ದೊಡ್ಡ ಹಗರಣ ಎನ್ನುವಂತೆ ಬಿಂಬಿಸಿದರು, ಆದರೆ ವಿಧಾನಸಭೆಯಲ್ಲಿ ಯಾಕೆ ಚರ್ಚೆ ಮಾಡಲಿಲ್ಲ ಎಂದು, ಪ್ರಶ್ನಿಸಿದ ಅವರು, ಬಿಜೆಪಿ ನಾಯಕರು ಹಿಟ್ ಅಂಡ್ ರನ್ ಇದ್ದ ಹಾಗೇ ಎಂದರು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್‌ ಶೆಡ್ಡಿಂಗ್ ಮಾಡೋದಿಲ್ಲ, ರಾಜ್ಯದ ರೈತರಿಗೆ ಬೇಸಿಗೆಯಲ್ಲೂ ಸಂಪೂರ್ಣ ‌ವಿದ್ಯುತ್ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.



ಸಂಬಂಧಿತ ಟ್ಯಾಗ್ಗಳು

D.K Shivakumar Load shedding ಇಂಧನ ಸಚಿವ ಯೋಗೇಶ್ ಗೌಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ