‘ವಿವಾದ ಬಗೆಹರಿಸಿದರೆ ಬಿಜೆಪಿಗೆ ಅಭಿನಂದನೆ’

MB Patil react on Mahadayi dispute

27-11-2017

ಗದಗ: ಮಹದಾಯಿ ಕುರಿತು ರಾಜ್ಯ ಬಿಜೆಪಿ ನಾಯಕರು ಪ್ರಧಾನಿಗೆ ಮನೆಪಾಠದ ಮೂಲಕ ಹಾದಿ ತಪ್ಪಿಸಿದ್ದಾರೆ ಎಂದು, ನೀರಾವರಿ ಸಚಿವ ಎಮ್.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಮಾತನಾಡಿದ ಅವರು, ಈ ಹಿಂದೇ ಇಂಧಿರಾಗಾಂಧಿ ಪ್ರಧಾನಿಯಾಗಿದ್ದಾಗಲೂ ಜಲದ ಸಮಸ್ಯೆ ಪರಿಹರಿಸಿದ್ದರು, ಗಂಗಾ, ನರ್ಮದಾ ನದಿ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ಕೈಗೊಂಡಿದ್ದರು, ಆದರೆ ವಿವಾದ ಇತ್ಯರ್ಥದಲ್ಲಿ ಬಿಜೆಪಿ ಕುಂಟುನೆಪ ಹೇಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕುಣಿಯೋಕೆ ಬರದಿದ್ರೆ ನೆಲ ಡೊಂಕು ಅನ್ನೋ ಪ್ರವೃತ್ತಿ ಬೇಡ ಎಂದರು.

ಡಿಸೆಂಬರ್ 15ರೊಳಗೆ ಮಹದಾಯಿ ವಿವಾದ ಇತ್ಯರ್ಥ ಪಡಿಸುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದು, ನಿಗದಿತ ಸಮಯದಲ್ಲೇ ಮಹದಾಯಿ ವಿವಾದ ಇತ್ಯರ್ಥವಾಗೋ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಅದಲ್ಲದೇ ಮಹದಾಯಿ ವಿವಾದ ಇತ್ಯರ್ಥ ಪಡಿಸಿದರೆ ಬಿಜೆಪಿಯವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.B.Patil Mahadayi River ವಿವಾದ ನೀರಾವರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ