ಯುವತಿಯೊಂದಿಗೆ ಎಸಿಪಿ ಅಸಭ್ಯವರ್ತೆನೆ

ACP harassed a young woman

27-11-2017

ಬೆಂಗಳೂರು: ನಗರದಲ್ಲಿ ಮತ್ತೊಬ್ಬ ಎಸಿಪಿ ಮೇಲೆ ಯುವತಿಯೊಬ್ಬರು, ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಯುವತಿಯೊಬ್ಬರ ಮೇಲೆ ಕಾಮುಕರಿಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಿಲು ಬಂದಾಗ, ಈ ವೇಳೆ ಎಸಿಪಿ ಆ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಕಳೆದವಾರ ಹನುಮಂತ ಮತ್ತು ರವಿ ಅನ್ನೋ ಕಾಮುಕರು ಸೌಮ್ಯಾ ಎಂಬ ಯುವತಿ ಮೈಕೈ ಮುಟ್ಟಿ  ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಸಂಬಂಧ ಸೌಮ್ಯ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಅಲ್ಲಿ ಸರಿಯಾಗಿ ವಿಚಾರಣೆ ಮಾಡುತ್ತಿಲ್ಲ ಎಂದು, ಸೀದಾ ಉತ್ತರ ಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಗೆ ದೂರು ನೀಡಿದರು. ಇನ್ನು ಇದಕ್ಕೆ ಸ್ಪಂದಿಸಿದ ಡಿಸಿಪಿ, ನಿಮ್ಮ ಕಂಪ್ಲೈಂಟ್ ಎಸಿಪಿ ಬಳಿ ಕೊಡಿ ಅವರು ಸಾಲ್ವ್ ಮಾಡ್ತಾರೆ ಎಂದು ಸೂಚನೆ ನೀಡಿದ್ದಾರೆ.

ಡಿಸಿಪಿ ಸೂಚನೆಯಂತೆಯೇ ನೊಂದ ಯುವತಿ, ಯಶವಂತಪುರ ಉಪವಿಭಾಗದ ಎಸಿಪಿ ರವಿಪ್ರಸಾದ್ ಅವರಿಗೆ ದೂರು ಕೊಡಲ ಹೋಗಿದ್ದಾರೆ, ಈ ವೇಳೆ ಎಸಿಪಿ ರವಿಪ್ರಸಾದ್, ಕಾಮುಕರು ನಿನ್ನ ದೇಹದ ಯಾವ ಭಾಗ ಮುಟ್ಟಿದ್ರು? ಹೇಗೆ ಮುಟ್ಟಿದ್ರು ಎಂದು ಅಸಭ್ಯವಾಗಿ ಯುವತಿ ಜೊತೆ ಮಾತನಾಡಿದ್ದಾರೆ. ಎಲ್ಲೆಲ್ಲಿ ಮುಟ್ಟಿದ್ರು ಆ ಜಾಗ ತೋರಿಸು ನಾನು ನೋಡಬೇಕು ಅಂತ ಬಹಳ ಕೆಟ್ಟದಾಗಿ ನಡೆದುಕೊಂಡಿದ್ದಾರೆ.

ಎಸಿಪಿ ಮಾತು ಕೇಳಿ ಕೆರಳಿದ ಯುವತಿ, ಈ ರೀತಿ ಯಾಕೆ ಕೇಳ್ತೀರ ಎಂದು ಗರಂ ಆಗಿದ್ದಾರೆ. ಆಗ ಅಲ್ಲೆ ಇದ್ದ ಇನ್ಸ್ ಪೆಕ್ಟರ್ ವೆಂಕಟೇಶಗೌಡ, ಸಾಹೇಬ್ರು ವಿಚಾರಣೆ ಮಾಡ್ತಾರೆ, ಅವರು ಹೇಗೆ ಹೇಳ್ತಾರೋ ಹಾಗೇ ಕೇಳು ಅಂತ ಧಮ್ಕಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಮೊದಲೇ ಕಾಮುಕರಿಂದ ಕಿರುಕುಳ ಅನುಭವಿಸಿದ್ದ ಯುವತಿ, ಎಸಿಪಿ ವರ್ತನೆಯಿಂದ ಮತ್ತಷ್ಟು ಆಘಾತಕ್ಕೊಳಗಾಗಿದ್ದು, ಸದ್ಯ ಮನನೊಂದ ಯುವತಿ ಆಯುಕ್ತರಿಗೆ, ಎಸಿಪಿ ಮಾಡಿದ ದುಷ್ಕೃತ್ಯದ ಇಂಚಿಂಚು ಮಾಹಿತಿ ನೀಡಿ ದೂರು ಸಲ್ಲಿಸಿದ್ದಾರೆ. ಎಸಿಪಿ ರವಿಪ್ರಸಾದ್ ಅವರ ಕೃತ್ಯ ಇಡೀ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

ACP Complaint ಕಾಮುಕ ಡಿಸಿಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ