ಚಂಪಾ ವಿರುದ್ಧ ಸಿ.ಟಿ.ರವಿ ವ್ಯಂಗ್ಯ

C.T Ravi v/s Champa

27-11-2017 221

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ರಾಜಕೀಯ ಭಾಷಣ ಹಿನ್ನೆಲೆ, ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಅವರು ಪ್ರತಿಕ್ರಿಯಿಸಿದ್ದು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಅವರು, ವೇದಿಕೆ ದುರುಪಯೋಗ ಮಾಡಿಕೊಂಡಿದ್ದು ದುರಾದೃಷ್ಟ ಎಂದಿದ್ದಾರೆ. ಅವರು ಈ ಹಿಂದೆಯೂ ಬಿಜೆಪಿ ವಿರುದ್ಧ ಮಾತನಾಡಿದ್ದಾರೆ, ಅವರಿಗೆ ರಾಜಕೀಯ ಚಟ ಇದ್ರೆ ರಾಜಕೀಯ ಪಕ್ಷಗಳ ಮೂಲಕ ಈ ರೀತಿ ಭಾಷಣ ಮಾಡಲಿ ಎಂದು ಹೇಳಿದ್ದಾರೆ.  ಜನ ಅವರ ಮಾತನ್ನು ಧಿಕ್ಕರಿಸಿ, ಹುಬ್ಬಳ್ಳಿಯಲ್ಲೇ ಬಿಜೆಪಿಗೆ ಅಧಿಕಾರ ನೀಡಿದ್ದಾರೆ, ಬಹುಶಃ ಅವರ ಮನೆಯಲ್ಲೂ ಅವರ ಮಾತು ಕೇಳುವ ಪರಿಸ್ಥಿತಿ ಇಲ್ಲ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.ಸಂಬಂಧಿತ ಟ್ಯಾಗ್ಗಳು

C.T.Ravi Chikmagalur ಭಾಷಣ ದುರುಪಯೋಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ