ಕುಲಕರ್ಣಿ ಬೆಂಬಲಕ್ಕೆ ಕೋಳಿವಾಡ...!

Koliwad support to Kulkarni...!

27-11-2017

ಬೆಂಗಳೂರು: ವಿನಯ್ ಕುಲಕರ್ಣಿ ವಿರುದ್ಧ, ಬಿಜೆಪಿ ವಿನಾಕಾರಣ ಆರೋಪ ಮಾಡುತ್ತಿದೆ, ಬಿಜೆಪಿಯದ್ದು ರಾಜಕೀಯ ದುರುದ್ದೇಶವೇ ಹೊರತು ಬೇರೆ ಏನು ಇದರಲ್ಲಿ ತಿರುಳಿಲ್ಲ ಎಂದು, ವಿಧಾನ ಸಭಾಧ್ಯಕ್ಷರಾದ ಕೆ.ಬಿ.ಕೋಳಿವಾಡ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಗಿರೀಶ್ ಗೌಡ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ, ಆದ್ರೂ ಕೂಡ ಬಿಜೆಪಿ ವಿನಾಕಾರಣ ವಿನಯ್ ಕುಲಕರ್ಣಿ ವಿಷಯವನ್ನು ರಾಜಕೀಯ ಮಾಡುತ್ತಿದೆ, ತನಿಖೆ ನಂತರ ಸತ್ಯ ಹೊರಬರಲಿದೆ ಎಂದರು.

ಇನ್ನು ಬೆಳಗಾವಿ ಅಧಿವೇಶನದಲ್ಲಿ ಶಾಸಕರ ಗೈರು ಮತ್ತು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರ ಹಾಜರಾತಿ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದೇನೆ, ಶಾಸಕರ ಕಡ್ಡಾಯ ಹಾಜರಾತಿ ಬಗ್ಗೆ ಯಾವುದೇ ಕಾನೂನು ನಿಯಮ ಇಲ್ಲ, ಹಾಗಾಗಿ ನಾನು ಮನವಿ ಮಾಡಬಹುದೇ ಹೊರತು ಕಾನೂನು ರೂಪಿಸುವಂತಿಲ್ಲ, ಎಂದು ತಿಳಿಸಿದರು. ಅಜೆಂಡಾದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ 5 ದಿನ ಸೀಮಿತವಾಗಿಟ್ಟಿದ್ದೆ, ಆದರೆ ಯಾರೂ ಆಸಕ್ತಿ ತೋರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒತ್ತಾಯ ಮಾಡೋಕೆ ಯಾವ ಕಾನೂನು ಇಲ್ಲ,  ಸರ್ಕಾರದ ಎಕ್ಸಿಕ್ಯೂಟಿವ್ ಕಾನೂನು ಜಾರಿಗೆ ಮುಂದಾದ್ರೆ ನಾವು ಅಳವಡಿಸಬಹುದು ಎಂದರು.


ಸಂಬಂಧಿತ ಟ್ಯಾಗ್ಗಳು

K. B. Koliwad Vinay Kulkarni ಸಭಾಧ್ಯಕ್ಷ ರಾಜಕೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ