ಸರಣಿ ಕಳ್ಳತನ..!

Series theft in Kalaburagi...!

27-11-2017

ಕಲಬುರಗಿ: ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಪಟ್ಟಣದ ಏಳೆಂಟು ಅಂಗಡಿಗಳ ಬೀಗ ಮುರಿದು ಸರಣಿಗಳ್ಳತನ ನಡೆಸಿದ್ದಾರೆ. ಮೆಡಿಕಲ್ ಶಾಪ್, ಕಿರಾಣಿ ಅಂಗಡಿ, ಗ್ಯಾಸ್ ಅಂಗಡಿ, ಸಿಮೆಂಟ್ ಅಂಗಡಿ, ಟೇಲರಿಂಗ್ ಅಂಗಡಿ ಸೇರಿದಂತೆ ಹಲವು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಟೇಲರ್ ಅಂಗಡಿಯಿಂದ ಬಟ್ಟೆ ಸೇರಿದಂತೆ ಸಾವಿರಾರು ರೂಪಾಯಿ ನಗದು ದೋಚಿದ್ದಾರೆ. ಘಟನೆಯಿಂದ ಅಂಗಡಿ ಮಾಲೀಕರು ಆತಂಕಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kalaburagi Robbery ಸರಣಿಗಳ್ಳತನ ಸಿಮೆಂಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ