ಚುನಾವಣೆಯಲ್ಲಿ ಮಂಗಳಮುಖಿಗೆ ಟಿಕೆಟ್..!

Ticket to transgender in Karnataka

25-11-2017 391

ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ಥಾಪಿಸಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್.ಪಿ.ಐ)ನ ಅಠಾವಳೆ ಬಣದ, ಕರ್ನಾಟಕದ ರಾಜ್ಯಾಧ್ಯಕ್ಷರಾಗಿರುವ ವೆಂಕಟಸ್ವಾಮಿ ಅವರು, ಇಂದು ಗಾಂಧಿನಗರದ ಕಾನಿಷ್ಕಾ ಹೋಟೆಲ್ ನ ಸಭಾಂಗಣದಲ್ಲಿ ನಡೆದ ವಿವಿಧ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರ್.ಪಿ.ಐ ಪಕ್ಷದ ವತಿಯಿಂದ ಕರ್ನಾಟಕದ ಯಾವುದಾದರು ಒಂದು ಕ್ಷೇತ್ರದಲ್ಲಿ ಮಂಗಳಮುಖಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. ಅಂಬೇಡ್ಕರ್ ಅವರು ಸಾರಿದ ಸಮಾನತೆ, ಘನತೆ ಮುಂತಾದ ತತ್ವಗಳ ಪ್ರೇರಣೆಯೊಂದಿಗೆ ನಡೆಯುತ್ತಿರುವ ಆರ್.ಪಿ.ಐ, ಮಂಗಳಮುಖಿಯರಿಗೆ ಟಿಕೆಟ್ ಕೊಡುವ ಮೂಲಕ ಅವರಿಗೂ ಸಮಾನತೆ ತೋರಿಸಿ, ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಿ ಈ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡುತ್ತಾ, ರಿಪಬ್ಲಿಕನ್ ಪಕ್ಷಕ್ಕೆ ಮಂಗಳಮುಖಿಯರ ಬೆಂಬಲ ದೊಡ್ಡ ರೀತಿಯಲ್ಲೇ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರನ್ನು ಮಂಗಳಮುಖಿ ಎಂದೂ ಪ್ರಥಮ ಬಾರಿಗೆ ಕರೆದಿದ್ದೂ ತಾವೇ ಎಂದು ವೆಂಕಟಸ್ವಾಮಿ ಅವರು ಈ ಸಂದರ್ಭದಲ್ಲಿ ಹೇಳಿದರು.ಸಂಬಂಧಿತ ಟ್ಯಾಗ್ಗಳು

Transgender RPI ಚುನಾವಣೆ ಮಂಗಳಮುಖಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ