ಹಾಡಹಗಲೇ ಬೊಲೆರೋ ಕಾರ್ ಕಳವು

Bolero car theft

25-11-2017

ಬೆಂಗಳೂರು: ರಸ್ತೆಯ ಬಳಿ ನಿಲ್ಲಿಸಿದ್ದ ಬೊಲೆರೋ ಕಾರನ್ನು ಹಾಡಹಗಲೇ ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿರುವ ದುರ್ಘಟನೆ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್‍ರಸ್ತೆಯಲ್ಲಿ ನಡೆದಿದೆ. ಕಾರನ್ನು ನಿನ್ನೆ ಮಧ್ಯಾಹ್ನ ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿರುವ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರು ಮಾಲೀಕ ಕಿರಣ್ ನೀಡಿರುವ ದೂರು ದಾಖಲಿಸಿಕೊಂಡಿರುವ ರಾಜಾಜಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇನ್ನೊಂದೆಡೆ ನಗರದ ಆರ್.ಟಿ ನಗರದ ಗಂಗಾನಗರದಲ್ಲಿನ ಶ್ರೀ ರಾಮ ದೇವಸ್ಥಾನದ ಬಳಿ ಮನೆ ಮುಂದೆ ನಿಲ್ಲಿಸಿದ್ದ ಡಿಯೊ ಸ್ಕೂಟರ್‍ ನನ್ನು ದುಷ್ಕರ್ಮಿಯೊಬ್ಬ ಕಳವು ಮಾಡಿ ಪರಾರಿಯಾಗಿದ್ದಾನೆ. ಬೆಳಗ್ಗೆ 10-40ರ ವೇಳೆ ಮೋಹನ್ ರಾಜ್ ಅವರು ಮನೆಯ ಮುಂಭಾಗ ಕಾರಿನ ಪಕ್ಕದಲ್ಲಿ ನಿಲ್ಲಿಸಿದ್ದ ಡಿಯೊ ಸ್ಕೂಟರ್‍ ನನ್ನು ಅತ್ತ ಇತ್ತ ನೋಡಿದ ಕಳ್ಳ, ಲಾಕ್ ಮುರಿದು, ಸ್ವಲ್ಪ ದೂರ ತಳ್ಳಿಕೊಂಡು ಹೋಗಿ ಪರಾರಿಯಾಗಿದ್ದಾನೆ.

ಕಳ್ಳನ ಪ್ರತಿಯೊಂದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಒಳಗೆ ಮೋಹನ ರಾಜ್ ಕುಟುಂಬ ಇದ್ದಾಗಲೇ ಕಳ್ಳ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ. ಆರ್ ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bolero car Rajajinagar ಸ್ಕೂಟರ್‍ ಹಾಡಹಗಲೇ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ