ಎಸಿಬಿ ಬಲೆಗೆ ಬಿಲ್ ಕಲೆಕ್ಟರ್

ACB trap bill collector

25-11-2017

ಬೆಂಗಳೂರು: ಇ-ಖಾತೆ ನೀಡಲು ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್‍ ನನ್ನು ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ನಗರದ ಹೊರಮಾವು ವ್ಯಾಪ್ತಿಯ ನಿವಾಸಿಯೊಬ್ಬರು ತಮ್ಮ ನಿವೇಶನದ ಇ-ಖಾತೆಗಾಗಿ ಸೊನ್ನಪ್ಪನಹಳ್ಳಿ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಸೊನ್ನಪ್ಪನಹಳ್ಳಿ ಪಂಚಾಯಿತಿ ಕಚೇರಿಯ ಬಿಲ್ ಕಲೆಕ್ಟರ್ ಹೆಚ್.ಮೂರ್ತಿ ಅವರು ಅದಕ್ಕಾಗಿ 6,000 ರೂ.ಗಳ ಲಂಚವನ್ನು ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದಾಗ ಮೂರ್ತಿ ಅವರನ್ನು ಬಂಧಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bill collector ACB ಲಂಚ ಅಧಿಕಾರಿಗಳು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ