ಉತ್ತಮ ನಡತೆ ರೌಡಿಗಳಿಗೆ ಒಳ್ಳೆ ಸುದ್ದಿ

good news for rowdies

25-11-2017

ಬೆಂಗಳೂರು: ಹಳೇ ರೌಡಿಗಳ ಮೇಲೆ ನಿಗಾ ಇಟ್ಟಿರುವ ನಗರ ಪೊಲೀಸರು, ಕಳೆದ 10 ವರ್ಷಗಳಿಂದ ಯಾವುದೇ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದೇ ಅಪರಾಧ ಕೃತ್ಯಗಳನ್ನು ನಡೆಸದೆ ಜೀವನ ಸಾಗಿಸುತ್ತಿರುವ ಉತ್ತಮ ನಡತೆ ಹೊಂದಿರುವ ರೌಡಿಗಳನ್ನು, ರೌಡಿ ಪಟ್ಟಿಯಿಂದ ಕೈಬಿಡಲು ನಗರ ಪೊಲೀಸರು ಮುಂದಾಗಿದ್ದಾರೆ.

ರೌಡಿ ಚಟುವಟಿಕೆಗಳನ್ನು ಬಿಟ್ಟು ಒಳ್ಳೆ ನಡತೆ, ಗಲಾಟೆಯಲ್ಲಿ ಕೈಕಾಲು ಕಳೆದುಕೊಂಡ ವಯಸ್ಸಾದವರ ರೌಡಿಗಳ ಪಟ್ಟಿ ಮಾಡುವಂತೆ ನಗರ ಪೊಲೀಸ್ ಆಯುಕ್ತ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿ ವರದಿ ಸಲ್ಲಿಸುವಂತೆ ಎಲ್ಲಾ ಡಿಸಿಪಿಗಳಿಗೆ ಆದೇಶಿಸಿದ್ದಾರೆ.

ನಗರದಲ್ಲಿ ಸುಮಾರು 13 ಸಾವಿರ ರೌಡಿಗಳಿದ್ದಾರೆ. ಅವರಲ್ಲಿ ವಯಸ್ಸಾದವರು, ಕೈಕಾಲು ಕಳೆದುಕೊಂಡವರು, ಅನಾರೋಗ್ಯದಿಂದ ಬಳಲುತ್ತಿರುವವರು ಉತ್ತಮ ಜೀವನ ನಡೆಸುತ್ತಿರುವವರು ಹಲವರು ಇದ್ದು, ಅವರ ಪಟ್ಟಿ ಮಾಡಿ ಕಳುಹಿಸಿದರೆ ಅಂತಹವರನ್ನು ರೌಡಿಪಟ್ಟಿಯಿಂದ ಕೈಬಿಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುನೀಲ್‍ಕುಮಾರ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy sheeter Police commissioner ಅಪರಾಧ ಡಿಸಿಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ