ಹುಡುಗಿಗಾಗಿ ಬಡಿದಾಡಿಕೊಂಡ ಹುಡುಗರು

students fight

25-11-2017

ಹಾಸನ: ಹುಡುಗಿ ವಿಚಾರವಾಗಿ ವಿದ್ಯಾರ್ಥಿಗಳಿಬ್ಬರ ನಡುವೆ ಜಗಳವಾಗಿ, ಜಗಳ ವಿಕೋಪಕ್ಕೆ ತಿರುಗಿರುವ ಘಟನೆಯು ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಕಲಗೂಡು ಬಸ್ ನಿಲ್ದಾಣದಲ್ಲಿ, ಕಾಲೇಜು ಮುಗಿದು ಊರಿಗೆ ಹೋಗಲು ಬಸ್ ಹತ್ತಲು ಬಂದಾಗ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿಯೇ ಕೈ ಕೈ ಮಿಲಾಯಿಸಿದ ಯುವಕರ ತಂಡ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಕಲ್ಲು ಎತ್ತಿಕೊಂಡು ಹೊಡೆಯಲು ಯುವಕನೊರ್ವ ಮುಂದಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರೇ ಮಧ್ಯಪ್ರವೇಶಿಸಿ ಗಲಾಟೆ ತಣ್ಣಗಾಗಿಸಿದ್ದಾರೆ. ಇನ್ನು ಹುಡುಗಿಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸ್ಥಳೀಯರು ಸಲಹೆ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Hassan Arakalagudu ಬಸ್ ನಿಲ್ದಾಣ ಕಾಲೇಜು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ