‘ದೇಶಾದ್ಯಂತ ಮದ್ಯ ಬ್ಯಾನ್ ಮಾಡ್ಬೇಕು’25-11-2017

ಬೆಳಗಾವಿ: ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ, ಬೆಳಗಾವಿಯಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ದರಾಮ ಸ್ವಾಮೀಜಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡಿ ಕ್ರಾಂತಿ ಮಾಡಿದ್ದಾರೆ, ಅದೇ ರೀತಿ ಮೋದಿಯವರು ದೇಶಾದ್ಯಂತ ಮದ್ಯಪಾನ ನಿಷೇಧ ಮಾಡಿ ಮತ್ತೊಂದು ಕ್ರಾಂತಿ ಮಾಡಲಿ ಎಂದು ಹೇಳಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಈ ಮೂಲಕ ಸರ್ಕಾರದ ಮೇಲೆ ಮದ್ಯಪಾನ ನಿಷೇಧಕ್ಕೆ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.

ಸರ್ಕಾರ ಮದ್ಯ ಮಾರಾಟಕ್ಕೆ ಟಾರ್ಗೆಟ್ ನೀಡುತ್ತಿದೆ, ಸರ್ಕಾರ ಟಾರ್ಗೆಟ್ ನೀಡುವುದನ್ನು ಬಿಟ್ಟು ಮದ್ಯಪಾನ ನಿಷೇಧ ಮಾಡ್ಬೇಕು, ಮಹಾತ್ಮ ಗಾಂಧಿಯವರ ಆಶಯದಂತೆ ಮದ್ಯಪಾನ ನಿಷೇಧ ಮಾಡಬೇಕಿದೆ ಎಂದು ಹೇಳಿದರು. ಸರ್ಕಾರ ಊಟಕ್ಕೆ ಅಕ್ಕಿ ಕೊಡ್ತಾರೆ, ಇದರಿಂದ ದುಡಿದ ಹಣವನ್ನು ಮದ್ಯಪಾನಕ್ಕೆ ವೆಚ್ಚ ಮಾಡ್ತಿದ್ದಾರೆ ಎಂದರು. ಇನ್ನು ಬೆಳಗಾವಿಯಲ್ಲಿ ಮದ್ಯಪಾನ ನಿಷೇಧಕ್ಕಾಗಿ, ಇದೇ ಡಿಸೆಂಬರ್ 2 ರಂದು ಮೂರು ಸಾವಿರಕ್ಕೂ ಅಧಿಕ ಜನರ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಶಿವಾಜಿ ಕಾಗಣಿಕರ, ಸದಾಶಿವರಾವ್ ಭೋಸಲೆ ಅವರು ಸ್ವಾಮೀಜಿಗೆ ಸಾಥ್ ನೀಡಿದರು.

 


ಸಂಬಂಧಿತ ಟ್ಯಾಗ್ಗಳು

Liquor Ban Press Meet ಮದ್ಯ ನಿಷೇಧ ಮದ್ಯ ವ್ಯಸನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ