ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ

25-11-2017
ದೇವನಹಳ್ಳಿ: ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಿಂದ ಮೂರು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಾದ, ಅಡಿಷನಲ್ ಕಮಿಷನರ್ ಹರ್ಷವರ್ಧನ್ ಉಮ್ರೆ, ಡೆಪ್ಯೂಟಿ ಕಮಿಷನರ್ ಶಿವಪ್ರಕಾಶ್ ಬಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, 1.29 ಕೋಟಿ ಮೌಲ್ಯದ 3 ಕೆ.ಜಿ ಗೂ ಅಧಿಕ ಚಿನ್ನ ವಶಕ್ಕೆ ಪಡೆದಿದ್ದಾರೆ. ಇದೇ ತಿಂಗಳ ನವೆಂಬರ್ 23 ರಂದು ದುಬೈನಿಂದ ಬಂದಿದ್ದ ವಿಮಾನದ ವಾಷ್ ರೂಂ. ನಲ್ಲಿನ ವಾಶ್ ಬೇಸಿನ್ ಕೆಳಗೆ ಚಿನ್ನ ಅಡಗಸಿಟ್ಟಿರುವುದನ್ನು ಪತ್ತೆಹಚ್ಚಿದ್ದಾರೆ. ಮತ್ತು ನ.24 ರಂದು ಅಕ್ರಮವಾಗಿ ಡಾಲರ್ಸ್ ಸಾಗಿಸುತ್ತಿದ್ದ, ಕೇರಳ ಮೂಲದ ಅಬ್ದುಲ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂತ 32.25 ಲಕ್ಷ ಮೌಲ್ಯದ ಯುಎಸ್ ಡಾಲರ್ಸ್ ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಒಂದು ಕಮೆಂಟನ್ನು ಹಾಕಿ