7 ಕಡೆ ಎಟಿಎಮ್ ದರೋಡೆಗೆ ಯತ್ನ

25-11-2017 393
ಕೊಪ್ಪಳ: ಎಟಿಎಮ್ ಗಳಿಗೆ ಕನ್ನ ಹಾಕುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಜಗದೀಶ್, ವಿಕ್ರಮ್ ಕುಮಾರ್ ಹಾಗೂ ಭವರ ಲಾಲ್ ಬಂಧಿತ ಆರೋಪಿಗಳು. ಕೊಪ್ಪಳದಲ್ಲಿ ಒಟ್ಟು ಏಳು ಕಡೆ ಕಳ್ಳತಕ್ಕೆ ಯತ್ನಿಸಿದ್ದು ಇದೀಗ ಪೊಲೀಸರ ಅಥಿತಿಗಳಾಗಿದ್ದಾರೆ. ಜಿಲ್ಲೆಯ ಇರಕಲ್ ಗಡ, ಅಗಳಕೇರಾ ಗ್ರಾಮದಲ್ಲಿನ ಎಟಿಎಮ್ ದರೋಡೆಗೆ ವಿಫಲಯತ್ನ ನಡೆಸಿದ್ದರು. ಅದಲ್ಲದೇ ಹುಲಗಿ, ಕನಕಗಿರಿ, ಗಿಣಗೇರಾ ಹಾಗೂ ಕುಷ್ಟಗಿಯಲ್ಲಿಯೂ ಎಟಿಎಮ್ ನಿಂದ ಹಣ ಕದಿಯಲು ಯತ್ನಿಸಿದ್ದರು. ಬಂಧಿತ ಮೂವರು ರಾಜಸ್ತಾನದವರು ಎಂದು ತಿಳಿದು ಬಂದಿದೆ. ಬಂಧಿತರಿಂದ 9 ಮೊಬೈಲ್, ಒಂದು ಬೈಕ್, ಎರಡು ಬಂಗಾರದ ತಾಳಿ ಸೇರಿ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ