‘ಕನ್ನಡವನ್ನು ನೀವು ಉಳಿಸಿ ಕನ್ನಡ ನಿಮ್ಮನ್ನು ಉಳಿಸುತ್ತದೆ’24-11-2017 183

ಮೈಸೂರು: ಕನ್ನಡಕ್ಕೆ ದೀಪ ಹಚ್ಚುವ ಕೈಗಳನ್ನ ಹಿಡಿಯೋಣ. ಕನ್ನಡಕ್ಕೆ ಬೆಂಕಿ ಹಚ್ಚುವ ಕೈಗಳಿಗೆ ಸಾಥ್ ನೀಡಬಾರದು ಎಂದು 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂದ್ರ ಶೇಖರ್ ಪಾಟೀಲ್ ಕರೆ ನೀಡಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು,  ಕನ್ನಡ ಸಾಹಿತ್ಯ ಭಾಷೆಗೆ ಪುಷ್ಟಿ ನೀಡಿವುದು ಸಮ್ಮೇಳನದ ಉದ್ದೇಶವಾಗಿದೆ. ಕನ್ನಡವನ್ನು ನೀವು ಉಳಿಸಿದರೇ ಕನ್ನಡ ನಿಮ್ಮನ್ನ ಉಳಿಸುತ್ತದೆ ಎಂದು ತಿಳಿಸಿದರು.

ಸಾಹಿತ್ಯ-ಬದುಕು ಅವಳಿ ಜವಳಿ ಇದ್ದಂತೆ: ಸಾಹಿತ್ಯ ಹಾಗೂ ಬದುಕು ಎರಡು ಅವಳಿ ಜವಳಿ ಇದ್ದಂತೆ. ಒಂದರ ಭಾವ ಇನ್ನೊಂದರ ಜೀವ. ಬರಹಗಾರರ ಹೊಣೆ ಜನಸಾಮಾನ್ಯರ ಹೊಣೆಗಿಂತ ಹೆಚ್ಚಾಗಿರುತ್ತದೆ. ಬದುಕಿನ ಮೂಕ ಜೀವನಕ್ಕೆ ಬರಹಗಾರ ನಾಲಿಗೆಯಾಗಬೇಕು. ಅಳಿವಿನ ಅಂಧಕಾರಕ್ಕೆ ಬರಹಗಾರ ಬೆಳಕಾಗಬೇಕು ಎಂದು ಹೇಳಿದ ಚಂಪ ಅವರು, ಕನ್ನಡ ಪ್ರಜ್ಞೆ ಅಪ್ಪಟ  ಜಾತ್ಯಾತೀತವಾದದ್ದು. ಮನುಷ್ಯ ಜಾತಿ ತಾನೊಂದೆ ವಲಂ ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ