ಬೆಳಗಾವಿ ಅಧಿವೇಶನ ಮುಕ್ತಾಯ

Belagavi session ended

24-11-2017

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಳೆದ ಹತ್ತು ದಿನಗಳಿಂದ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಇಂದು ಮುಕ್ತಾಯಗೊಂಡಿತು. ಈ ಬಾರಿಯ ಅಧಿವೇಶನದಲ್ಲಿ ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ, ಮೌಢ್ಯ ನಿಷೇಧ, ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ, ಕಂಬಳ ಸೇರಿದಂತೆ ಪ್ರಮುಖ ವಿಧೇಯಕಗಳು ಸುದೀರ್ಘ ಚರ್ಚೆ ನಡೆದು ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡವು.

ಮೆಕ್ಕೆಜೋಳ ಬೆಲೆ ಕುಸಿತ, ಕಬ್ಬು, ತೆಂಗು, ಅಡಿಕೆ ಸೇರಿದಂತೆ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳು ಅಧಿವೇಶನದಲ್ಲಿ ಪ್ರಸ್ತಾಪಗೊಂಡು ಚರ್ಚೆಯಾದರೂ ಸರ್ಕಾರದ ವತಿಯಿಂದ ಯಾವುದೇ ನಿರ್ದಿಷ್ಟ ಪರಿಹಾರ ಷೋಷಣೆ ಹೊರಬರಲಿಲ್ಲ.

ವಿಧಾನ ಮಂಡಲದ ಉಭಯ ಸದನಗಳಲ್ಲಿ ಡಿವೈಎಸ್ಪಿ ಗಣಪತಿ  ಸಾವು ಪ್ರಕರಣ ಪದೇ ಪದೇ ಪ್ರತಿಧ್ವನಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತಲ್ಲದೆ, ಹಲವು ಬಾರಿ ಕೋಲಾಹಲಕ್ಕೂ ಕಾರಣವಾಗಿ ಅಧಿವೇಶನದ ಕೆಲವು ಸಮಯ ಬಲಿಯಾಯಿತು. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆ, ಕಳಸಾ-ಬಂಡೂರಿ ನಾಲಾ, ಮಹದಾಯಿ ವಿವಾದ, ಪ್ರಾದೇಶಿಕ ಅಸಮತೋಲ, ಡಾ.ಡಿ.ಎಂ.ನಂಜುಂಡಪ್ಪ ವರದಿಯ ಅನುಷ್ಠಾನದ ಬಗ್ಗೆ ವಿಶೇಷ ಚರ್ಚೆಗೆ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವಕಾಶ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ