ಸಾಹಿತಿ ಬರಗೂರು ರಾಮಚಂದ್ರಪ್ಪ ಗರಂ..!

Baraguru ramachanrappa raram

24-11-2017

ಮೈಸೂರು: ಮೈಸೂರಿನಲ್ಲಿ ಅಕ್ಷರ ಜಾತ್ರೆಗೆ ಚಾಲನೆ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರನ್ನು, ಸಾಹಿತಿ ಬರಗೂರು ರಾಮಚಂದ್ರಪ್ಪ ತರಾಟೆಗೆ ತೆಗೆದುಕೊಂಡರು.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆತ ಬಳಿಕ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ಸ್ಪರ್ಧಾತ್ಮಕ ದೃಷ್ಟಿಕೋನದ ಹೆಸರಲ್ಲಿ ಶಾಲೆಗಳನ್ನು ಟುಟೋರಿಯಲ್‍ಗಳಾಗಿ ಬದಲಾಯಿಸಲಾಗುತ್ತಿದೆ. ಈ ಆದೇಶವನ್ನು ನಾನು ವಿರೋಧಿಸಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ. ಆದರೆ ಈವರೆಗೂ ಸಚಿವರಿಂದ ಉತ್ತರ ಬರಲಿಲ್ಲ. ನಂತರ ಮುಖ್ಯಮಂತ್ರಿ ಅವರಿಗೂ ಕೂಡ ಮನವಿ ಮಾಡಿದ್ದೆ. ಅದರೆ ಅವರು ಶಿಕ್ಷಣ ಸಚಿವರು ನಿಮ್ಮೊಂದಿಗೆ ಮಾತನಾಡ್ತಾರೆ ಅಂದ್ರು, ಆದ್ರೆ ತನ್ವೀರ್ ಸೇಠ್ ಕ್ಯಾರೆ ಅಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಸಾಂಸ್ಕೃತಿಕ ಸರ್ವಾಧಿಕಾರವನ್ನು ಬಳಸಲಾಗುತ್ತಿದೆ. ಇದು ಪ್ರಜಾತಂತ್ರ ಆಶಯಕ್ಕೆ ವಿರೋಧವಾದುದ್ದು. ಕನ್ನಡ ಸಾಹಿತ್ಯ ರಾವಣ ನಲ್ಲಿ ರಾಮನ ಗುಣ ತೋರಿಸಿತ್ತು. ಕನ್ನಡ ಭಾಷೆ ಹಿಂಸೆ, ಖಳನಾಯಕತ್ವವನ್ನು ಎಂದೂ ಬಿಂಬಿಸಲಿಲ್ಲ ಎಂದು ಹೊಗಳಿದ ಬರಗೂರು ರಾಮಚಂದ್ರಪ್ಪ ಅವರು, ದೇಶದಲ್ಲಿ ಪ್ರತಿನಾಯಕತ್ವ ಸ್ಥಾಪಿಸಬೇಕು. ಪತ್ರಕರ್ತೆ ಗೌರಿ ಲಂಕೇಶ್, ಹಾಗೂ ಕಲ್ಬುರ್ಗಿ ಅವರ ಹತ್ಯೆಯಾಗಿದೆ. ಅವರನ್ನ ನಾವು ಕಳೆದುಕೊಂಡಿದ್ದೇವೆ. ಈ ಮೂಲಕ ಸುಪಾರಿ ಸಂಸ್ಕೃತಿ ನಾಡಿಗೆ ಪ್ರವೇಶ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ