ಬೆಂಕಿ ತಗುಲಿ ಯುವಕ ಆಸ್ಪತ್ರೆಪಾಲು

gas leak: fire on young man

24-11-2017

ಬೆಂಗಳೂರು: ಹಲಸೂರಿನ ಮೊದಲ ಹಂತದ ಜಿ ಸ್ಟ್ರೀಟ್‍ನಲ್ಲಿ ನಿನ್ನೆ ರಾತ್ರಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ, ಬೆಂಕಿ ತಗುಲಿ ಪ್ರಣೀತ್ ಎಂಬ ಯುವಕ ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಕೆಲಸದ ಮೇಲೆ ಹೊರಗಡೆ ಹೋಗಿದ್ದ ಪ್ರಣೀತ್(28)ರಾತ್ರಿ 8.30ರ ವೇಳೆ ಬಾಗಿಲು ಮನೆಗೆ ಬಂದು ಬಾಗಿಲು ತೆಗೆದು ಲೈಟ್ ಹಾಕಿದ ಕೂಡಲೇ ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ತಗುಲಿ ಆತನ ಎದೆಯ ಭಾಗ ಸುಟ್ಟು ಹೋಗಿದೆ.

ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಕಿಯಿಂದ ಮನೆಯಲ್ಲಿರುವ ವಸ್ತುಗಳೆಲ್ಲ ಸುಟ್ಟು ಹೋಗಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಹಲಸೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಗರದ ಇನ್ನೊಂದೆಡೆ, ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ದುರ್ಘಟನೆ ಕಾಟನ್‍ಪೇಟೆಯ ಅಂಜನಾಪುರ ಗಾರ್ಡನ್‍ ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಬೆಂಕಿಯಿಂದ ಪಲ್ಸರ್, ಸುಜುಕಿ ಆಕ್ಸಿಸ್, ಹೋಂಡಾ ಡಿಯೋ ಸಂಪೂರ್ಣ ಸುಟ್ಟು ಹೋಗಿದ್ದು, ಹೋಂಡಾ ಆಕ್ಟಿವಾ ಅರ್ಧಭಾಗ ಸುಟ್ಟಿದೆ. ಬೆಂಕಿಯನ್ನು ನೋಡಿದ ಸ್ಥಳೀಯರು ನಂದಿಸುವಷ್ಟರಲ್ಲಿ ವಾಹನಗಳು ಸುಟ್ಟು ಹೋಗಿದ್ದು, ವಾಹನಗಳ ಮಾಲೀಕ ಕಾರ್ತಿಕ್ ನೀಡಿರುವ ದೂರು ದಾಖಲಿಸಿಕೊಂಡ ಕಾಟನ್‍ ಪೇಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ