ತಹಶೀಲ್ದಾರ್ ಗೆ ದಂಡ..!

Information commission fine to Tahsildar

24-11-2017

ತುಮಕೂರು: ಪಾವಗಡದ ತಹಶೀಲ್ದಾರ್ ಟಿ.ತಿಪ್ಪುರಾವ್ ಅವರಿಗೆ 15 ಸಾವಿರ ದಂಡವನ್ನು, ಕರ್ನಾಟಕ ಮಾಹಿತಿ ಆಯೋಗ ವಿಧಿಸಿದೆ. ಆರ್.ಟಿ.ಐ ಅರ್ಜಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ ತಹಶೀಲ್ದಾರ್ ಗೆ ದಂಡ ವಿಧಿಸಿದೆ. ಆರ್.ಟಿ.ಐ ಅರ್ಜಿ ಸಲ್ಲಿಸಿ ಮೂರು ವರ್ಷವಾದರು ಮಾಹಿತಿ ನೀಡದೆ ಬೇಜವಾಬ್ದಾರಿ ತೋರಿದ್ದಾರೆ. ಪಾವಗಡದ ದವನಂ ಎ.ಅಮರನಾಥ್ ಎಂಬುವರು ಆರ್.ಟಿ.ಐ ಅರ್ಜಿ ಸಲ್ಲಿಸಿದ್ದರು. ಜಮೀನು ಹಕ್ಕು ಬದಲಾವಣೆ ಕುರಿತು ಮಾಹಿತಿ ಕೇಳಿದ್ದ ಅರ್ಜಿದಾರಿಗೆ ಇದುವರೆಗೂ ಮಾಹಿತಿ ನೀಡಿಲ್ಲ. ಇದನ್ನು ಪರಿಗಣಿಸಿದ ಮಾಹಿತಿ ಹಕ್ಕು ಆಯೋಗ, 30 ದಿನದೊಳಗೆ, ಮಾಹಿತಿ ಹಕ್ಕು ಕಾಯ್ದೆ ಖಾತೆಗೆ ದಂಡ ಕಟ್ಟಲು ಆದೇಶ ನೀಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ