ಕಪ್ ಕೇಕ್ v/s ಕ್ಯಾರೆಟ್v/s ಮೆದುಳು

Obesity Makes Your Brain Older

24-11-2017

ನಿಮ್ಮ ಎದುರಿಗೆ ಒಂದು ಕ್ಯಾರೆಟ್ ಮತ್ತು ಕಪ್ ಕೇಕ್ ಇಟ್ಟಿದ್ದಾಗ, ನೀವು ಕ್ಯಾರೆಟ್ ಬದಲು ಕಪ್ ಕೇಕ್ ಗೆ ಕೈ ಹಾಕವಂಥವರೇನು? ಹಾಗಿದ್ರೆ ಹುಷಾರಾಗಿರಿ, ‘ನೀವು ಏನನ್ನು ತಿನ್ನುತ್ತೀರೋ ಅದೇ ಆಗ್ತೀರ’ ಅಂತ ಕೇಂಬ್ರಿಜ್ ವಿಶ್ವವಿದ್ಯಾಲಯದವರು ನಡೆಸಿರೋ ಒಂದು ಅಧ್ಯಯನ ಹೇಳುತ್ತೆ.

ಈ ಒಬೆಸಿಟಿ ಅಥವ ಸ್ಥೂಲಕಾಯ ಅಥವ ಬೊಜ್ಜು ಮೈ ಅನ್ನೋದು ನೀವು ಅಂದುಕೊಂಡಿರೋದಕ್ಕಿಂತ ಹೆಚ್ಚೇ ಅಪಾಯಕಾರಿ. ಸ್ಥೂಲಕಾಯ ಅನ್ನೋದು ಬೇರೆ ಎಲ್ಲ ಸಮಸ್ಯೆಗಳ ಜೊತೆಗೆ ನಮ್ಮ ಮೆದುಳಿನ ಮೇಲೂ ಪ್ರಭಾವ ಬೀರುತ್ತೆ ಅಂತ ಈ ಹೊಸ ಅಧ್ಯಯನದಿಂದ ತಿಳಿದುಬಂದಿದೆ. ನೀವು ಬೊಜ್ಜಿನ ಶರೀರ ಹೊಂದಿರುವವರಾಗಿದ್ದರೆ, ಇತರೆಯವರಿಗಿಂತ ನಿಮಗೆ ಬೇಗ ವಯಸ್ಸಾದಂತಾಗುತ್ತದೆ, ನಿಮ್ಮ ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆ, ತೆಳ್ಳಗಿರುವ ಸಾಧಾರಣ ವ್ಯಕ್ತಿಗಳಿಗಿಂತ 10 ಪಟ್ಟು ಹೆಚ್ಚು ಎಂದು ಹೇಳಲಾಗುತ್ತಿದೆ.

ಬೊಜ್ಜು ಮೈ ಹೊಂದಿರುವುದರಿಂದ ಹೃದಯ, ಕಿಡ್ನಿ, ಲಿವರ್ ಇತರೆ ಅಂಗಾಂಗಗಳ ಮೇಲೆ ಆಗುವ ದುಷ್ಪರಿಣಾಮ ಈಗಾಗಲೇ ತಿಳಿದಿದ್ದವು. ಆದರೆ, ಈ ಹೊಸ ಅಧ್ಯಯನದಿಂದ, ಸ್ಥೂಲಕಾಯ ಹೊಂದಿರುವವರಲ್ಲಿ ಸ್ಮರಣ ಶಕ್ತಿ, ಯೋಚನಾ ಶಕ್ತಿಗಳೂ ಕುಗ್ಗಬಹುದು ಅನ್ನುವುದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

obesity cambridge university ಬೊಜ್ಜು ಹೃದಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ