ರಮಾನಾಥ್ ರೈ ಮೇಲೆ ಹೆಜ್ಜೇನು ದಾಳಿ

Bees attack on Ramanath Rai

24-11-2017

ಬೆಳಗಾವಿ: ಬೆಳಗಾವಿಯಲ್ಲಿ ಬಯೋಪಾರ್ಕ್ ಉದ್ಘಾಟನಾ ಸಮಾರಂಭದ ವೇಳೆ ಅವಘಡ ಸಂಭವಿಸಿದ್ದು, ಅರಣ್ಯ ಸಚಿವ ರಮಾನಾಥ್  ರೈ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಸಮಾರಂಭ ನಡೆಯುತ್ತಿದ್ದ ವೇಳೆ, ಜೇನುಹುಳುಗಳು ಏಕಾಏಕಿ ದಾಳಿ ಮಾಡಿದ್ದು, ತಮ್ಮ-ತಮ್ಮ ರಕ್ಷಣೆಗಾಗಿ ಸಚಿವ ರಮಾನಾಥ ರೈ ಸೇರಿದಂತೆ, ಎಲ್ಲರೂ ಸಮಾರಂಭ ಬಿಟ್ಟು ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯಲ್ಲಿ ಸಚಿವರಿಗೆ ಯಾವುದೇ ತೊಂದರೆಯಾಗಿಲ್ಲ. ಇನ್ನು ಆರಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಅಧಿಕಾರಿಗಳು, ಜನರು ಭಯದಿಂದ ಕ್ಷಣಮಾತ್ರದಲ್ಲಿ ಮಾಯವಾಗಿದ್ದಾರೆ. ಇನ್ನು ಬಯೋಪಾರ್ಕ್ ಉದ್ಘಾಟನೆ ಅಪೂರ್ಣವಾಗಿದೆ.

 


ಸಂಬಂಧಿತ ಟ್ಯಾಗ್ಗಳು

Ramanath rai bio park ಸಮಾರಂಭ ಅರಣ್ಯ ಸಚಿವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ