ರೌಡಿ ಮೇಲೆ ತನ್ನ ಸಹಚರನೇ ಅಟ್ಯಾಕ್

24-11-2017
ಬೆಂಗಳೂರು: ರೌಡಿಶೀಟರ್ ಒಬ್ಬನ ಮೇಲೆ, ತನ್ನ ಸಹಚರನೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ನಗರದ ಕೊಡಿಗೆಹಳ್ಳಿಯಲ್ಲಿ ರೌಡಿಶೀಟರ್ ನವೀನ್ ಅಲಿಯಾಸ್ ಅಪ್ಪು ಎಂಬಾತನ ಮೇಲೆ ಸಹಚರ ಮನ್ಸೂರ್, ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕಳೆದ ರಾತ್ರಿ ಕಂಠ ಪೂರ್ತಿಕುಡಿದ ಅಪ್ಪು ಹಾಗೂ ಆತನ ಸಹಚರ ಮನ್ಸೂರ್, ಅವರು ತಂಗಿದ್ದ ರೂಮಿಗೆ ಬಂದಿದ್ದಾರೆ. ಈ ವೇಳೆ ಹಳೆ ವಿಷಯಗಳ ಮನಸ್ತಾಪದಿಂದ ಮನ್ಸೂರ್ ಗೆ ಅಪ್ಪು ಹಲ್ಲೆಗೈದು ಮಲಗಿದ್ದ.
ಆದರೆ ಇಂದು ಬೆಳಿಗ್ಗೆ ಸಹಚರ ಮನ್ಸೂರ್, ರೌಡಿ ಶೀಟರ್ ಅಪ್ಪುಗೆ ಮಚ್ಚಿನಿಂದ ತಲೆ ಹಾಗೂ ಕೈ ಭಾಗಕ್ಕೆ ಮಾರಣಾಂತಿ ಹಲ್ಲೆ ಮಾಡಿ, ನಂತರ ತಪ್ಪಿಸಿಕೊಳ್ಳಲು ಮಹಡಿ ಮೇಲಿಂದ ಜಿಗಿದಿದ್ದು, ಆತನೂ ಸಹ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಇಬ್ಬರನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದು, ಕಾಡುಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ