‘ಚೆಕ್ ಬುಕ್’ ರೈಲಿಗೆ ಬ್ರೇಕ್ ಇಲ್ಲ …!

No proposal to withdraw cheque book..!

24-11-2017

ಭಾರತದಲ್ಲಿ ಚೆಕ್ ಬುಕ್ ಗಳೇ ಮಾಯ ಆಗೋ ಸಾಧ್ಯತೆ ಬಗ್ಗೆ ಓದಿ ನಿಮಗೆಲ್ಲ ಒಂದಿಷ್ಟು ಆಘಾತ ಆಗಿತ್ತೇನೋ? ಆದರೆ, ಇದೀಗ ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದು, ‘ಚೆಕ್ ಸೌಲಭ್ಯ ರದ್ದು ಪಡಿಸುವ ಯಾವುದೇ ಪ್ರಸ್ತಾಪ ಇಲ್ಲ’ ಎಂದು ಹೇಳಿದೆ. ಹೀಗಾಗಿ, ಹಲವಾರು ಕಾರಣಗಳಿಗಾಗಿ ಚೆಕ್ ಗಳನ್ನು ಬಳಸುತ್ತಿದ್ದವರೆಲ್ಲರೂ ನಿರಾತಂಕವಾಗಿ ತಮ್ಮ ವ್ಯವಹಾರಗಳನ್ನು ಮುಂದುವರಿಸಬಹುದು.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಗೆ ಹೆಚ್ಚು ಉತ್ತೇಜನ ನೀಡುವ ಸಲುವಾಗಿ ಚೆಕ್ ಸೌಲಭ್ಯ ಹಿಂಪಡೆಯುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಖಿಲ ಭಾರತ ವ್ಯಾಪಾರಸ್ಥರ ಮಹಾಮಂಡಳಿಯ ಮಹಾ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ಅವರು ಹೇಳಿಕೆ ನೀಡಿದ್ದರು. ಈ  ವಿಚಾರ ದೇಶದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಕೇಂದ್ರದ ಹಣಕಾಸು ಇಲಾಖೆಯೇ ನೇರವಾಗಿ ಈ ವಿಚಾರವನ್ನು ತಳ್ಳಿಹಾಕಿರುವುದು ಬ್ಯಾಂಕುಗಳ ಗ್ರಾಹಕರಿಗೆ ತುಸು ಸಮಾಧಾನ ತಂದಿದೆ.


ಸಂಬಂಧಿತ ಟ್ಯಾಗ್ಗಳು

Checkbook Finance commission ಆಘಾತ ಕ್ರೆಡಿಟ್ ಕಾರ್ಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ